ರಾಣಿಪುರ ಪ್ರವಾಸಿ ತಾಣದಲ್ಲಿ ದುರಂತ: ಜಿಪ್‌ಲೈನ್‌ನಿಂದ ಬಿದ್ದು ಆಪರೇಟರ್ ಮೃತ್ಯು

ಕಾಸರಗೋಡು: ಪ್ರಸಿದ್ಧ ಪ್ರವಾಸಿ ತಾಣವಾದ ರಾಣಿಪುರದಲ್ಲಿ ಜಿಪ್‌ಲೈನ್‌ನಿಂದ ಬಿದ್ದು ಆಪರೇಟರ್ ಮೃತಪಟ್ಟ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ.
ಚಾಮುಂಡಿಕುನ್ನು ನಿವಾಸಿ ಸನೂಪ್ ಕೃಷ್ಣನ್ (24) ಮೃತಪಟ್ಟವರು .
ಸನೂಪ್ ಕೃಷ್ಣನ್ ನಿನ್ನೆಯಷ್ಟೇ (ಶುಕ್ರವಾರ) ಇಲ್ಲಿ ಜಿಪ್‌ಲೈನ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ.
ರಾಣಿಪುರ ಪ್ರವಾಸಿ ಕೇಂದ್ರದಲ್ಲಿ ಜಿಪ್‌ಲೈನ್ (ರೋಪ್‌ವೇ) ಮೂಲಕ ಯುವತಿಯೊಬ್ಬರು ಸಾಹಸಯಾತ್ರೆ ಪ್ರವಾಸಿಗರನ್ನು ಹತ್ತಿಸುತ್ತಿದ್ದಾಗ ಕೇಬಲ್ ಸಿಲುಕಿದ್ದು ಇದನ್ನು ಬಿಡಿಸಲೆತ್ನಿಸಿದಾಗ ಸನೂಪ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಸನೂಪ್ ರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರಾಜಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Next Story




