ಉಪ್ಪಳ : ಕಾರು, ಸ್ಕೂಟರ್ ಢಿಕ್ಕಿ; ತಲಪಾಡಿ ನಿವಾಸಿ ಮೃತ್ಯು

ಕಾಸರಗೋಡು: ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಉಪ್ಪಳ ಗೇಟ್ ಬಳಿ ಬುಧವಾರ ಸಂಜೆ ನಡೆದಿದೆ.
ತಲಪಾಡಿಯ ಅಬ್ದುಲ್ ಹಮೀದ್ (48) ಮೃತಪಟ್ಟವರು. ಸ್ಕೂಟರ್ ಚಲಾಯಿಸಿದ ಅಜೀಸ್ ಅಹಮ್ಮದ್ ( 41) ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲಪಾಡಿ ಕಡೆಯಿಂದ ಉಪ್ಪಳಕ್ಕೆ ಬರುತ್ತಿದ್ದ ಸ್ಕೂಟರ್ ಮತ್ತು ಎದುರಿನಿಂದ ಬರುತ್ತಿದ್ದ ಕಾರು ಢಿಕ್ಕಿಯಾಗಿ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ಹಮೀದ್ ರನ್ನು ಉಪ್ಪಳದ ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಲಿಲ್ಲ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





