Uppala | ಇಂಜಿನ್ ಕೆಟ್ಟು ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿ: ನಾಲ್ವರು ಬೆಸ್ತರ ರಕ್ಷಣೆ

ಮಂಜೇಶ್ವರ: ಉಪ್ಪಳ ಮುಸೋಡಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯ ಇಂಜಿನ್ ಕೆಟ್ಟುಹೋಗಿ, ಸಮುದ್ರ ಮಧ್ಯೆ ಸಿಲುಕಿದ ನಾಲ್ವರು ಬೆಸ್ತರನ್ನು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಕುಂಬಳೆಯ ಕರಾವಳಿ ಪೊಲೀಸರು ರಕ್ಷಿಸಿದ ಘಟನೆ ರವಿವಾರ ನಡೆದಿದೆ.
ಬೆಳಗ್ಗೆ ಮುಸೋಡಿ ತೀರದಿಂದ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯು ಸಮುದ್ರ ದಲ್ಲಿ ಇಂಜಿನ್ ದೋಷದಿಂದ ಅಪಾಯಕ್ಕೆ ಸಿಲುಕಿತ್ತು. ಕೂಡಲೇ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೀನುಗಾರಿಕೆ ಇಲಾಖೆಯ ನೆರವಿನಿಂದ ಎಲ್ಲರನ್ನೂ ದಡಕ್ಕೆ ತಲುಪಿಸಿ ಅಪಾಯದಿಂದ ಪಾರು ಮಾಡಿದರು.
Next Story




