ವಾರ್ತಾಭಾರತಿಯ ಇಸ್ಮಾಯಿಲ್ ಕಂಡಕೆರೆಗೆ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಸೋಮವಾರ ಪ್ರಕಟಿಸಲಾಗಿದ್ದು, ವಾರ್ತಾಭಾರತಿ ಪತ್ರಿಕೆಗೆ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ ಲಭಿಸಿದೆ.
ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ''ಕೊಡಗಿನ ಕ್ರೀಡಾಕಲಿಗಳಿಗೆ ಕಾಡುತ್ತಿರುವ ದೈಹಿಕ ಶಿಕ್ಷಕರ ಕೊರತೆ'' ವರದಿಗೆ ವಾರ್ತಾಭಾರತಿ ಕೊಡಗು ಜಿಲ್ಲೆಯ ವಿಶೇಷ ವರದಿಗಾರ ಕೆ.ಎಂ ಇಸ್ಮಾಯಿಲ್ ಕಂಡಕೆರೆ ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story