ಕೊಡಗು | ಮರದ ರೆಂಬೆಗಳನ್ನು ಕಡಿಯುತ್ತಿದ್ದ ವೇಳೆ ಬಿದ್ದು ಕಾರ್ಮಿಕ ಮೃತ್ಯು

ದಿನೇಶ್(59)
ಮಡಿಕೇರಿ: ಮರದ ರೆಂಬೆಗಳನ್ನು ಕಡಿಯುತ್ತಿದ್ದ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಮರಳಗಟ್ಟೆಯ ಮುತ್ತೂರು ಕಾಲೋನಿಯ ನಿವಾಸಿ ದಿನೇಶ್(59) ಸಾವನ್ನಪ್ಪಿರುವವರು.
ಬೆಟ್ಟದಕಾಡು ಗ್ರಾಮದ ತೋಟದಲ್ಲಿ ದಿನೇಶ್ ಮರದ ರೆಂಬೆಗಳನ್ನು ಕಡಿಯುವ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಯಿತು.
Next Story