Kushalnagar | ಕಾಡಾನೆ ದಾಳಿಗೆ ಗ್ರಾ.ಪಂ ಮಾಜಿ ಸದಸ್ಯೆ ಬಲಿ : ವಾಲ್ನೂರು ಗ್ರಾಮದಲ್ಲಿ ಘಟನೆ

ಮಡಿಕೇರಿ : ಕಾಡಾನೆ ದಾಳಿಗೆ ಸಿಲುಕಿ ಗ್ರಾ.ಪಂ ಮಾಜಿ ಸದಸ್ಯರೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದಲಿ ನಡೆದಿದೆ.
ನಂಜರಾಯಪಟ್ಟಣ ಗ್ರಾ.ಪಂ ಮಾಜಿ ಸದಸ್ಯೆ, ಬಾಳೆಗುಂಡಿ ಹಾಡಿ ನಿವಾಸಿ ಜಲಜಾಕ್ಷಿ (53) ಎಂಬುವವರೇ ಮೃತ ಮಹಿಳೆ. ಇಂದು ಬೆಳಿಗ್ಗೆ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಜಲಜಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Next Story





