ಮಡಿಕೇರಿ | ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು

ಮಡಿಕೇರಿ : ದೋಣಿ ಮಗುಚಿದ ಪರಿಣಾಮ ಇಬ್ಬರು ಯುವಕರು ನೀರುಪಾಲಾದ ಘಟನೆ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡವು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.
ಮೃತರನ್ನು ಭಾಗಮಂಡಲ ಸಮೀಪದ ಚೇರಂಬಾಣೆಯ ಪಾಕ ಗ್ರಾಮದ ಮುಕ್ಕಾಟಿ ವಿಠಲ ಎಂಬುವವರ ಪುತ್ರ ಅಯ್ಯಪ್ಪ (18)ಹಾಗೂ ಐವತ್ತೋಕ್ಲು ಗ್ರಾಮದ ಪರಮೇಶ್ ಎಂಬುವವರ ಪುತ್ರ ಗಿರೀಶ್ (16) ಎಂದು ಗುರುತಿಸಲಾಗಿದೆ.
ಸ್ನೇಹಿತರೊಂದಿಗೆ ಅಯ್ಯಪ್ಪ ಹಾಗೂ ಗಿರೀಶ್ ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡವು ಗ್ರಾಮಕ್ಕೆ ತೆರಳಿದ್ದರು. ಕೂರುಳಿ ಕಡೆಯಿಂದ ಕಡಿಯತ್ತೂರು ಗ್ರಾಮಕ್ಕೆ ದೋಣಿಯಲ್ಲಿ ಸಾಗುವಾಗ ದೋಣಿ ಮಗುಚಿ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಹೊಳೆಯಲ್ಲಿ ಮುಳುಗಿದ ಯುವಕರಿಗಾಗಿ ಶೋಧ ಕಾರ್ಯ ನಡೆಸಿದ ಸಂದರ್ಭ ಗಿರೀಶ್ ನ ಮೃತದೇಹ ಪತ್ತೆಯಾಗಿ ಹೊರತೆಗೆಯಲಾಗಿದೆ. ಅಯ್ಯಪ್ಪನ ಮೃತದೇಹಕ್ಕಾಗಿ ಪತ್ತೆಕಾರ್ಯ ಮುಂದುವರೆದಿದೆ.
ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





