Madikeri | ದೇವರಕೊಲ್ಲಿಯಲ್ಲಿ ಲಾರಿ ಬೆಂಕಿಗಾಹುತಿ

ಮಡಿಕೇರಿ : ಮೈಸೂರಿನಿಂದ-ಮಂಗಳೂರು ಕಡೆಗೆ ಫ್ಲೈವುಡ್ ಶೀಟ್‍ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಕೊಲ್ಲಿ ಬಳಿ ನಡೆದಿದೆ.
ಫ್ಲೈವುಡ್ ತುಂಬಿದ್ದ ಲಾರಿ ಮೈಸೂರಿನಿಂದ ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ರ ದೇವರಕೊಲ್ಲಿ ಬಳಿ ಬೆಳಗಿನ ಜಾವ ಆಗಮಿಸಿದೆ. ಈ ವೇಳೆ ಇಂಜಿನ್ ಭಾಗದಿಂದ ಹೊಗೆ ಕಂಡು ಬಂದಿದ್ದು, ಚಾಲಕ ಕೆಳಕ್ಕಿಳಿದು ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಲಾರಿಯನ್ನು ವ್ಯಾಪಿಸಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಬೆಂಕಿ ವ್ಯಾಪಿಸಿದ್ದ ಹಿನ್ನೆಲೆ ಜೆಸಿಬಿ ಯಂತ್ರ ಬಳಸಿ ಲಾರಿಯಿಂದ ಫ್ಲೈವುಡ್ ಹೊರ ತೆಗೆದು ಬೆಂಕಿ ನಂದಿಸಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





