MEIF ಕೊಡಗು ಘಟಕ| 2 ದಿನಗಳ ಮೊಂಟೆಸ್ಸರಿ (ನರ್ಸರಿ) ಶಿಕ್ಷಕರ ಕಾರ್ಯಾಗಾರ

ಗೋಣಿಕೊಪ್ಪ: ಕೊಡಗು ಜಿಲ್ಲೆಯ MEIF ವ್ಯಾಪ್ತಿಗೆ ಒಳಪಡುವ ಎಲ್ಲಾ ವಿದ್ಯಾ ಸಂಸ್ಥೆಗಳ ಮೊಂಟೆಸ್ಸರಿ ವಿಭಾಗದ ಶಿಕ್ಷಕರುಗಳಿಗೆ ಮಂಗಳೂರಿನ ಅಕ್ಷರ ಹೌಸ್ ಆಫ್ ಚಿಲ್ಡ್ರನ್ - ದಿ ಯೆನೆಪೋಯ ಸ್ಕೂಲ್ ಜೆಪ್ಪಿನಮೊಗರು ಇದರ ಸಹಯೋಗದಲ್ಲಿ 2 ದಿನಗಳ ಕಾರ್ಯಾಗಾರವು ಗೋಣಿಕೊಪ್ಪದಲ್ಲಿನ "ಇನ್ಸೈಟ್ ಗ್ಲೋಬಲ್ ಅಕಾಡೆಮಿ" ಯಲ್ಲಿ ಇಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ ಸೈಟ್ ಗ್ಲೋಬಲ್ ಅಕಾಡೆಮಿ ಗೋಣಿಕೊಪ್ಪ ಇದರ ನಿರ್ದೇಶಕರಾದ ಕೆ. ಅಹ್ಮದ್ ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಘಟಕದ ಅಧ್ಯಕ್ಷರಾದ ಕೆ.ಎ ಶಾದಲಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಪ್ರೊ. ಸಿನಾನ್ ಝಕರಿಯ್ಯ - ಡೈರೆಕ್ಟರ್ YACL ಬಹ್ರೈನ್ ಭಾಗವಹಿಸಿದ್ದರು.
MEIFನ ಕಾರ್ಯ ಚಟುವಟಿಕೆಗಳ ಬಗ್ಗೆ MEIF ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಾಸ್ತಾವಿಕವಾಗಿ ವಿವರಿಸಿದರು.
ಅತಿಥಿಗಳಾಗಿ ಎಂ.ಎಸ್ ಸಲೀಮ್ - ಉಮ್ಮತ್ ಒನ್ ಕೊಡಗು, MEIF ಕೇಂದ್ರ ಸಮಿತಿ ಕಾರ್ಯದರ್ಶಿ ಮೊಹಮ್ಮದ್ ಶಾರಿಕ್, ಕೊಡಗು ಘಟಕದ ಉಪಾಧ್ಯಕ್ಷರು ಮೊಹಮ್ಮದ್ ಮಣಿ.
ಕೊಡಗು ಘಟಕದ ಕಾರ್ಯದರ್ಶಿ ಅರ್ಷದ್ ಸಿ.ಎ ಸ್ವಾಗತಿಸಿದರು. ಸಯೀದ ನಿಕತ್ ಅಸ್ಮ ಉಪಸ್ಥಿತರಿದ್ದರು.
ಯೆನೆಪೋಯ ವಿದ್ಯಾ ಸಂಸ್ಥೆಯ ನುರಿತ ಮೊಂಟೆಸ್ಸರಿ ತರಬೇತುದಾರರಾದ ಆಂಟನಿ ಜೋಸೆಫ್ (ಪ್ರಾಂಶುಪಾಲರು), ತಾನಿಯ, ಶಮೀನ, ದೀಪ್ತಿ, ಸರಿತಾ, ಎಮಿಲೆನ್, ಶಿಲ್ಪ ಶೆಟ್ಟಿ ಕಾರ್ಯಾಗಾರ ನೆರವೇರಿಸಿದರು.
ಇನ್ ಸೈಟ್ ಗ್ಲೋಬಲ್ ಅಕಾಡೆಮಿಯ ಶಾಹಿದ ಕಾರ್ಯಕ್ರಮ ನಿರೂಪಿಸಿದರು. ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ ಬಶೀರ್ ವಂದಿಸಿದರು.