Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕೊಡಗು
  4. ಬಡವರು, ಆದಿವಾಸಿ, ಅಲ್ಪಸಂಖ್ಯಾತರ ಮತ...

ಬಡವರು, ಆದಿವಾಸಿ, ಅಲ್ಪಸಂಖ್ಯಾತರ ಮತ ಕಿತ್ತುಕೊಳ್ಳುವ ಹುನ್ನಾರ; SIR ರದ್ದುಪಡಿಸಲು ಪ್ರಕಾಶ್ ರಾಜ್ ಆಗ್ರಹ

ಪಾಲೆಮಾಡುವಿನಲ್ಲಿ SIR ಸಂತ್ರಸ್ತರ ಸಮಾವೇಶ; 500ಕ್ಕೂ ಹೆಚ್ಚು ಸಂತ್ರಸ್ತರ ಅಳಲು, ಪ್ರಕಾಶ್ ರಾಜ್ ಬೆಂಬಲ

ಕೆ.ಎಂ ಇಸ್ಮಾಯಿಲ್ ಕಂಡಕರೆಕೆ.ಎಂ ಇಸ್ಮಾಯಿಲ್ ಕಂಡಕರೆ29 Sept 2026 6:50 PM IST
share
ಬಡವರು, ಆದಿವಾಸಿ, ಅಲ್ಪಸಂಖ್ಯಾತರ ಮತ ಕಿತ್ತುಕೊಳ್ಳುವ ಹುನ್ನಾರ; SIR ರದ್ದುಪಡಿಸಲು ಪ್ರಕಾಶ್ ರಾಜ್ ಆಗ್ರಹ

ಮಡಿಕೇರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ದೇಶದ ಬಡವರು, ವಲಸೆ ಕಾರ್ಮಿಕರು, ಆದಿವಾಸಿಗಳು, ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಚಿಂತಕ, ಹೋರಾಟಗಾರ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಡಿಕೇರಿ ತಾಲ್ಲೂಕಿನ ಪಾಲೆಮಾಡು ಗ್ರಾಮದಲ್ಲಿ ಎಸ್ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ, ಕೊಡಗು ಜಿಲ್ಲಾ ಎಸ್ಐಆರ್ ಸಂತ್ರಸ್ತರ ಸಾರ್ವಜನಿಕ ಸಮೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತಾನಡಿದರು.

1950ರಲ್ಲಿ ಬ್ರಿಟಿಷರು ಹೋಗುವಾಗ ಹೇಳಿದರು, ಈ ದೇಶದಲ್ಲಿ ಓದಿದವರು ಕಡಿಮೆ ಇದ್ದಾರೆ, ಆದ್ದರಿಂದ ವಿದ್ಯಾವಂತರಿಗೆ ಮಾತ್ರ ಮತ ನೀಡಿ ಎಂದರು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರು ಅವರು ಹೇಳಿದರು ಇಲ್ಲ, ಅಕ್ಷರಸ್ಥನಿರಲಿ, ಅನಕ್ಷರಸ್ಥನಿರಲಿ, ಬಡವನಿರಲಿ, ಶ್ರೀಮಂತನಿರಲಿ, ಗಂಡಸಿರಲಿ, ಹೆಂಗಸಿರಲಿ ಎಲ್ಲ ಪ್ರಜೆಗಳಿಗೂ ಸರ್ಕಾರ ಆಯ್ಕೆ ಮಾಡುವ ಹಕ್ಕು ಇರಬೇಕು ಎಂದು. 1950ರಲ್ಲೇ ಈ ದೇಶದಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಕೊಟ್ಟರು. ಆದರೆ ದೇಶದಲ್ಲಿ ಇದೀಗ ಎಸ್ಐಆರ್ ಹೆಸರಿನಲ್ಲಿ ಮತದಾರರನ್ನು ಹೊರಗಿಡುವಂತಹ ಕೆಲಸ ಮಾಡುತ್ತಿದ್ದಾರೆ.

ದೇಶದಲ್ಲಿ ಈಗಾಗಲೇ ಎಸ್ಐಆರ್ ಪ್ರಕ್ರಿಯೆಯಲ್ಲಿ 13 ಕೋಟಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಕರ್ನಾಟಕದಲ್ಲಿ 1.8 ಕೋಟಿ ಮತದಾರರನ್ನು ASDDO ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಅದಲ್ಲದೇ 43 ಲಕ್ಷ ಮತದಾರರಿಗೆ ಅನ್ ಮ್ಯಾಪಿಂಗ್ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಹೆಸರಿನಲ್ಲಿ ನೋಟಿಸ್ ನೀಡಲಾಗಿದೆ. ರಾಜ್ಯದಲ್ಲಿ ಮತದಾರರನ್ನು ಹೊರಗಿಡುವ ಹುನ್ನಾರಕ್ಕೆ ನಾವು ಪ್ರತಿರೋಧ ಹಾಕಿದ್ದೇವೆ. ಕೂಡಲೇ ಎಸ್ಐಆರ್ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

"1950ರಲ್ಲಿ ಯಾವ Date of Birth ಇತ್ತು? ಯಾವ Birth Certificate ಇತ್ತು? ಮನೆಯಲ್ಲೇ ಹೆರಿಗೆ ಆಗುತ್ತಿತ್ತು. ತಾಯಿಯನ್ನು ಕೇಳಿದರೆ - ಗಾಂಧಿ ನಮ್ಮ ಊರಿಗೆ ಬಂದಾಗ ಹುಟ್ಟಿದ, ಬರಗಾಲ ಬಂದಾಗ ಹುಟ್ಟಿದ, ಚಿಕನ್ ಪಾಕ್ಸ್ ಬಂದಾಗ ಹುಟ್ಟಿದ, ದೊಡ್ಡ ಮಳೆ ಬಂದಾಗ ಹುಟ್ಟಿದ, ಟ್ರೈನ್ ನಮ್ಮೂರಿಗೆ ಬಂದಾಗ ಹುಟ್ಟಿದ ಅಂತ ಹೇಳುತ್ತಿದ್ದರು. ಅಂತಹ ಭಾರತ ಇನ್ನೂ ಇದೆ. 80 ವರ್ಷವಾದರೂ ಇವತ್ತಿಗೂ ಮನೆ ಇಲ್ಲದವರು, ನೆಲೆ ಇಲ್ಲದವರು, ಅನಕ್ಷರಸ್ಥರು ಇದ್ದಾರೆ.ಏತನ್ಮಧ್ಯೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಂತ ನೋಟಿಸ್ ಜಾರಿ,ದಾಖಲೆಗಳನ್ನು ಕೇಳುತ್ತಿದ್ದಾರೆ.

ಸ್ಪೆಲ್ಲಿಂಗ್ ತಪ್ಪು ಮಾಡಿದ್ದು ಯಾರು?

"ಇಂದು ಸ್ಪೆಲ್ಲಿಂಗ್ ಮಿಸ್ಟೇಕ್, ಹೆಸರು ಜೋಡಣೆ ತಪ್ಪು, ಹೆಸರು ಚೇಂಜ್ ಆಗಿದೆ, ನಂಬರ್ ಚೇಂಜ್ ಆಗಿದೆ ಎಂದು ಕಾರಣ ಕೊಟ್ಟು ಜನರ ಮತ ಕಿತ್ತ ಮಾಡಲಾಗುತ್ತಿದೆ. ಆದರೆ ಈ ತಪ್ಪು ಮಾಡಿದ್ದು ಜನರಲ್ಲ, ಸರ್ಕಾರಿ ವ್ಯವಸ್ಥೆ. ಸ್ಪೆಲ್ಲಿಂಗ್ ತಪ್ಪು ಮಾಡಿದವರು ಸರ್ಕಾರಿ ನೌಕರರು. ಸರ್ಕಾರಿ ವ್ಯವಸ್ಥೆ ತಪ್ಪು ಮಾಡಿ, ಅದಕ್ಕೆ ಜನರಿಗೆ ಶಿಕ್ಷೆ ಕೊಡುವುದು ಸರಿಯಲ್ಲ‌ ಎಂದು ಹೇಳಿದರು.

"ಈ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಅಜ್ಜಿ ಮತ್ತು ಮೊಮ್ಮಗಳಿಗೆ 15-20 ವರ್ಷ ಮಾತ್ರ ವ್ಯತ್ಯಾಸ ಇರುವ ಕುಟುಂಬಗಳಿವೆ. ತಾಯಿ ಮಗಳು ಒಂದೇ ಸಲ ಬಸುರಿ ಆಗಿರುವುದನ್ನು ನಾವು ನೋಡಿದ್ದೇವೆ. ಅಜ್ಜಿಗೆ ಮಗಳಿಗೆ 40 ವರ್ಷ ಅಂತರ ಇರಬೇಕು ಅಂತ ಎಸ್ಐಆರ್ ಪ್ರಕ್ರಿಯೆಯಲ್ಲಿ ನಿಯಮ ರೂಪಿಸಿದ್ದಾರೆ.

ಎಸ್ಐಆರ್ ಅವೈಜ್ಞಾನಿಕ;

ಎಸ್ಐಆರ್ ಯಾರು ಕೂಡ ಒಪ್ಪಿಕೊಳ್ಳಲಾಗದ ಅವೈಜ್ಞಾನಿಕವಾಗಿದೆ. ದೇಶದಲ್ಲಿ ಮತಗಳ ಅಂಕಿ ಅಂಶಗಳ ಅಪ್ಡೇಟ್ ಆಯಿತು. ಆದಾದ ಆರು ತಿಂಗಳಲ್ಲೇ ಪುನಃ SIR ತಂದಿದ್ದು ಯಾಕೆ ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದರು

1956 ರ ಸಂವಿಧಾನ ಎಲ್ಲರನ್ನು ಮತದಾರರನ್ನಾಗಿ ಮಾಡಿ ಹೇಳಿತು. ಆ ಮೂಲಕವೇ ಚುನಾವಣಾ ಪ್ರಕ್ರಿಯೆ ಆರಂಭ ಆಗಿತ್ತು. ಸಂವಿಧಾನ ಬದ್ಧವಾಗಿ ಮತದಾನ ಮೂಲಭೂತ ಹಕ್ಕು. ಎಲ್ಲರಿಗೂ ಮತದಾನ ಕೊಡುತ್ತೇವೆ ಎಂದು ಸಂವಿಧಾನ ಹೇಳಿದೆ. ಆದರೆ SIR ಮೂಲಕ ಮತ ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ.

ತಾಯಿ ಮಗುವಿಗೆ 18 ರಿಂದ 20 ವರ್ಷ ವಯಸ್ಸಿನ ಅಂತರ ಇರಬೇಕು ಅಂತ SIR ಹೇಳುತ್ತಿದೆ. ಆದರೆ ಇಂದಿಗೂ ದೇಶದಲ್ಲಿ ತಾಯಿ ಮಗಳೂ ಇಬ್ಬರೂ ಒಟ್ಟಿಗೆ ಬಸುರಿ ಆಗಿರುವ ಪ್ರಕರಣಗಳಿಲ್ಲವೆ? ಐದಾರು ಮಕ್ಕಳನ್ನು ಹೆರುವಾಗ ಇದೆಲ್ಲವೂ ಆಗುತ್ತದೆ ಅಲ್ಲವೆ? ಎಂದು ಪ್ರಶ್ನಿಸಿದರು.

ಸಾವಿರಾರು ಜನರು ಕೂಲಿಗಾಗಿ ಬೇರೆಡೆಗೆ ಹೋಗಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿಲ್ಲವೆ? ನೀವು ಎನ್ಯೂಮರೇಷನ್ ಫಾರಂ ತೆಗೆದುಕೊಂಡು ಹೋಗ್ತೀರ, ಆ ವೇಳೆ ಅವರು ಮನೆಯಲ್ಲಿ ಇಲ್ಲ ಎಂದರೆ ಪರ್ಮನೆಂಟ್ ಇಲ್ಲ ಎಂದು ಅರ್ಥವೇ?

SIR ಮಾಡುವುದಕ್ಕೆ ನಿಮಗೆ ಇಷ್ಟೊಂದು ಅರ್ಜೆಂಟ್ ಏನು? ಇನ್ನು 8-10 ತಿಂಗಳು ಸಮಯ ತೆಗೆದುಕೊಳ್ಳಿ. ರಾಜ್ಯದಲ್ಲಿ ಚುನಾವಣೆಗೆ ಎರಡು ವರ್ಷ ಇದೆ.

ಇಂದು ರಾಜ್ಯದಲ್ಲಿ 1.08 ಕೋಟಿ ಜನರು ಮತದಾನದಿಂದ ಹೊರಗುಳಿದಿದ್ದಾರೆ. 43 ಲಕ್ಷ ಜನರಿಗೆ ಮ್ಯಾಪಿಂಗ್ ಆಗಿಲ್ಲ. ಬಿಜೆಪಿಗರು 18 ಸಾವಿರ ಮುಸ್ಲಿಂ ದಲಿತರ ಓಟ್ ತೆಗೆಯಿರಿ ಎಂದು ಫಾರಂ 7 ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.

ಜನರ ಕಾಲಿಗೆ ಬಿದ್ದು ಓಟ್ ಪಡೆದು ಎಂಎಲ್ಎ, ಎಂಪಿ ಆಗಿದ್ದೀರಲ್ಲ. ಆದರೆ ಈಗ ಮತದಾರರು ನಮ್ಮ ಓಟ್ ನಮಗೆ ಕೊಡಿ ಎಂದು ನಿಮ್ಮ ಕೈ ಕಾಲು ಹಿಡಿಯುವಂತೆ ಆಗಿದೆ.

ಜ್ಞಾನೇಶ್ ಕುಮಾರ್ ಎಂಬ ದೊಡ್ಡ ಕಳ್ಳನನ್ನು ಮೊದಲು ತೆಗೆದು ಹಾಕಿ ಎಂದು ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ಹರಿಹಾಯ್ದರು.

ಕೂಡಲೇ SIR ರದ್ದು ಮಾಡಿ. ಕಳೆದ ಮೂರು ವರ್ಷಗಳಿಂದ ನೀವು ಮಾಡಿದ ಎಲ್ಲಾ ನಿರ್ಧಾರಗಳ ಫೈಲ್ ಗಳನ್ನು ಸುಪ್ರೀಂಕೋರ್ಟಿಗೆ ಕೊಡಿ. ಇಡೀ ಭಾರತದಲ್ಲಿ 13 ಕೋಟಿ ಮತದಾರರನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು.

ಎಲೆಕ್ಷನ್ ಕಮಿಷನ್ ಗೆ ಈ ಹುನ್ನಾರ ನಡೆಯಲು ಬಿಡಲ್ಲ. ಎಲೆಕ್ಷನ್ ಕಮಿಷನ್ ಮೇಲೆ ಯಾವುದೇ ರೀತಿ ದೂರು ದಾಖಲಿಸುವಂತಿಲ್ಲ ಎಂದು ಬಿಜೆಪಿ ನಿಯಮ ಮಾಡಿತು. ಇದನ್ನು ಮಾಡಿದ್ದು ಏಕೆ ಎಂದು ಬಿಜೆಪಿ ಹೇಳಲಿ.

ಬಿಜೆಪಿಯವರಿಗೆ ಮುಸ್ಲಿಂ ಕ್ರಿಶ್ಚಿಯನ್ ಸಮುದಾಯದ ಓಟ್ ಬೇಕಾಗಿಲ್ಲ. ಅದಕ್ಕೆ ಅವರು ಇದನ್ನು ಮಾಡಿದ್ದಾರೆ. ಮುಸ್ಲಿಂ ಕ್ರಿಶ್ಚಿಯನ್ ಮತದಾರರನ್ನು ಕೊಲ್ಲುವುದಕ್ಕೆ ಆಗುತ್ತಿಲ್ಲ, ಅದಕ್ಕೆ ಮತದಾನವನ್ನು ಕಿತ್ತುಕೊಳ್ಳುವ ಮೂಲಕ ಕೊಲ್ಲುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಜನರಿಗೆ ಇಂದು ವಸತಿ ಇಲ್ಲ. ಆದರೆ ವಸತಿಗಾಗಿಯೇ ನಾನು ಹೋರಾಟ ಶುರು ಮಾಡುತ್ತೇನೆ. ವಸತಿ ಕೊಡದಿದ್ದರೆ ನಾನು ಏನು ಮಾಡಬೇಕು ಎಂದು ಗೊತ್ತಿದೆ. ಭಾರತ ದೇಶದಲ್ಲಿ ಅಲ್ಪಸಂಖ್ಯಾತರು ಬಡವರು ಇರಬಾರದು ಎನ್ನುವುದು ಬಿಜೆಪಿ ಉದ್ದೇಶ ಎಂದು ಹೇಳಿದರು.

ನಮ್ಮ ಹೋರಾಟ ನಮ್ಮನ್ನು ಮತ್ತೆ ಸೇರಿಸಿಕೊಳ್ಳಿ ಎಂದಲ್ಲ, ಬದಲಾಗಿ SIR ಅನ್ನೇ ರದ್ದು ಮಾಡಬೇಕು ಎನ್ನುವುದು ನಮ್ಮ ಹೋರಾಟ. ಕೊನೆಯ ಮತದಾರನ ಓಟ್ ಬರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ‌ ಎಂದರು.

ಸರ್ಕಾರಕ್ಕೆ ವಾಸ್ತವಾಂಶ ಸಲ್ಲಿಕೆ;

ದೋಷಪೂರಿತ SIR ಪ್ರಕ್ರಿಯೆ ವಿರುದ್ಧ ರಾಜ್ಯದಲ್ಲಿ ಸಂಚರಿಸಿ ವಿವಿಧ ನಾಗರಿಕರ ಸಂಘಟನೆಗಳ ಜೊತೆ ಸೇರಿ SIR ಪರಿಶೋಧ ಮತ್ತು ಪ್ರತಿರೋಧ ನಡೆಸುವ ಕೆಲಸ ಮಾಡಿದ್ದೇವೆ.

ರಾಜ್ಯದಲ್ಲಿ ಸುಮಾರು 100 ಮತಗಟ್ಟೆಗಳಲ್ಲಿ ಈ ಬಗ್ಗೆ ಸಾಮಾಜಿಕ ಸಮೀಕ್ಷೆ ನಡೆಸಿ ಈ ದೋಷಪೂರಿತ SIR ಪ್ರಕ್ರಿಯೆಯ ಬಗ್ಗೆ ರಾಜ್ಯದ ಸಚಿವ ಸಂಪುಟದ ಸಚಿವರಿಗೆ ಮತ್ತು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ವಾಸ್ತವಾಂಶವನ್ನು ಸೆ.30(ಇಂದು) ರಂದು ಬಹಿರಂಗಪಡಿಸಲಾಗುವುದೆಂದು ಪ್ರಕಾಶ್ ರಾಜ್ ಹೇಳಿದರು.

ಅಕ್ಟೋಬರ್ 1ರಂದು ದಿಲ್ಲಿಯಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದೇವೆ. ಜಾರ್ಖಂಡ್, ಅಸ್ಸಾಂ, ಮಹಾರಾಷ್ಟ್ರ, ದಿಲ್ಲಿ, ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ನಾವೆಲ್ಲ ಸೇರಿ ಒಂದು ದೊಡ್ಡ ಆಂದೋಲನಕ್ಕೆ ಕರೆ ಕೊಡುತ್ತಿದ್ದೇವೆ‌ ಎಂದು ಪ್ರಕಾಶ್ ರಾಜ್ ಮಾಹಿತಿ ನೀಡಿದರು.

ಕೊಡಗಿನಲ್ಲಿ ಲೈನ್ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಶಾಶ್ವತ ಸ್ಥಳಾಂತರ ಎಂದು ASDDO ಪಟ್ಟಿಗೆ ಸೇರಿಸಿದ್ದಾರೆ.ಕೆಲವು ಕಡೆಗಳಲ್ಲಿ ಎನ್ಯುಮರೇಶನ್ ಫಾರ್ಮ್ ಕೊಟ್ಟೇ ಇಲ್ಲ.

ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳು, ಬಡ ಕೂಲಿ‌ ಕಾರ್ಮಿಕರು ಎಸ್ಐಆರ್ ಪ್ರಕ್ರಿಯೆಯಿಂದಾಗಿ ತೊಂದರೆ ಅನುಭವಿಸಿದ್ದಾರೆ.

ಸಾವಿರಾರು ಜನರು ಕೂಲಿಗಾಗಿ ಬೇರೆಡೆಗೆ ಹೋಗಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿಲ್ಲವೆ? . ನೀವು ಎನ್ಯೂಮರೇಷನ್ ಫಾರಂ ತೆಗೆದುಕೊಂಡು ಹೋಗ್ತೀರ, ಆ ವೇಳೆ ಅವರು ಮನೆಯಲ್ಲಿ ಇಲ್ಲ ಎಂದರೆ ಪರ್ಮನೆಂಟ್ ಇಲ್ಲ ಎಂದು ಅರ್ಥವೇ? ಅವರನ್ನು Permanently Shifted, Absent ಎಂದು ಮತ ಕಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

500 ಕ್ಕೂ ಹೆಚ್ಚು ಎಸ್ಐಆರ್ ಸಂತ್ರಸ್ತರು ಭಾಗಿ;

ಪ್ರಕಾಶ್ ‌ರಾಜ್ ನೇತೃತ್ವದಲ್ಲಿ ಪಾಲೆಮಾಡುವಿನಲ್ಲಿ ನಡೆದ ಎಸ್ಐಆರ್ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಮಂದಿ ಎಸ್ಐಆರ್ ಪ್ರಕ್ರಿಯೆಯಿಂದ ತೊಂದರೆ ಅನುಭವಿಸಿದ ಮತದಾರರ ಭಾಗವಹಿಸಿದ್ದರು. ನೋಟಿಸ್ ಜಾರಿಯಾಗಿ ದಾಖಲೆ ಸಲ್ಲಿಸಲು ಸಾಧ್ಯವಾಗದವರು.

ASDDO ಪಟ್ಟಿಯಲ್ಲಿ ಇರುವ ಮತದಾರರು,ಎನ್ಯುಮರೇಶನ್ ಫಾರ್ಮ್ ಸಿಗದ ಅರ್ಹ ಮತದಾರರು ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಅಳಲನ್ನು ತೋಡಿಕೊಂಡರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಎಸ್.ಡಿ.ಪಿ‌ಐ ಅಧ್ಯಕ್ಷ ಅಮೀನ್ ಮೊಹಸ್ಸೀನ್,

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪ್ರಮುಖರಾದ ಮೊಣ್ಣಪ್ಪ,ನಿರ್ವಾಣಪ್ಪ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಬೋಜಣ್ಣ ಸ್ವಾಮಿ,ನಾಗರಿಕ ಮತ ಕಾವಲು ಸಮಿತಿ ಸದಸ್ಯರು,ಮತ್ತಿತರು ಇದ್ದರು.

ವಸತಿ ವಂಚಿತರ ಹೋರಾಟಕ್ಕೆ ನಾನು ಬರುವೆ

ಕೊಡಗು ಜಿಲ್ಲೆಯ ಎರಡು ಮೂರು ಭಾಗಗಳಿಗೆ ಭೇಟಿ ನೀಡಿ ವಸತಿ ವಂಚಿತರೊಂದಿಗೆ ಮಾತನಾಡಿದ್ದೇನೆ. ಜಿಲ್ಲೆಗೆ ಮತ್ತೊಮ್ಮೆ ಬರುವೆ ನಾನು‌.

ಇಲ್ಲಿನ ಸಮಸ್ಯೆಯ ಬಗ್ಗೆ ಕೂಲಂಕುಷವಾಗಿ ತಿಳಿದು,ನಿಮ್ಮ ಹೋರಾಟಕ್ಕೆ ನಾನು ಕೈ ಜೋಡಿಸುವೆ.ಕಾನೂನಿನ ಮೂಲಕ ಹೋರಾಟ ಮಾಡೋಣ.ಎಲ್ಲರಿಗೂ ವಸತಿ ಸಿಗಬೇಕು.

ಎಸ್ಐಆರ್ ಪ್ರತಿರೋಧ ಸಮಾವೇಶಕ್ಕೆ ಹೋಗಬಾರದೆಂದು ಕೆಲವು ಕಡೆಗಳಲ್ಲಿ ಎಸ್ಐಆರ್ ಸಂತ್ರಸ್ತರಿಗೆ ಬಿಎಲ್ಒ ಗಳು,ವಿ.ಎ‌ಗಳು ಹೇಳಿರುವ ಮಾಹಿತಿ ನನಗೆ ಸಿಕ್ಕಿದೆ. ನಿಮ್ಮ ಎಲ್ಲರ ‌ಕಳ್ಳತನ ಬಯಲಾಗಿದೆ. ಈ‌ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು.

Tags

votesPrakash RajSIR
share
ಕೆ.ಎಂ ಇಸ್ಮಾಯಿಲ್ ಕಂಡಕರೆ
ಕೆ.ಎಂ ಇಸ್ಮಾಯಿಲ್ ಕಂಡಕರೆ
Next Story
X