ಎಸೆಸೆಲ್ಸಿ ಉತ್ತೀರ್ಣನಾದ ಖುಷಿಯಲ್ಲಿ ಈಜಲು ತೆರಳಿದ್ದ ಬಾಲಕ ಬಾವಿಯಲ್ಲಿ ಮುಳುಗಿ ನಾಪತ್ತೆ

ಕೋಲಾರ : ಇಂದು ಪ್ರಕಟಗೊಂಡ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತೀರ್ಣನಾದ ಖುಷಿಯಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ ಬಾಲಕನೋರ್ವ ಬಾವಿ ನೀರಲ್ಲಿ ಮುಳುಗಿ ಕಣ್ಮರೆಯಾದ ದಾರುಣ ಘಟನೆ ಮುಳಬಾಗಿಲು ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದ ಕಿರಣ್ (15) ಬಾವಿ ನೀರಲ್ಲಿ ಮುಳುಗಿ ನಾಪತ್ತೆಯಾದ ಬಾಲಕ.
ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಸ್ನೇಹಿತರೊಂದಿಗೆ ತೆರಳಿದ್ದ ಕಿರಣ್, ಆಳದ ಬಾವಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಕಿರಣ್ ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story




