Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕೋಲಾರ
  4. ಕೋಲಾರ: ಡಿ.25 ರಿಂದ 27ರ ವರೆಗೆ ‘ಆದಿಮ...

ಕೋಲಾರ: ಡಿ.25 ರಿಂದ 27ರ ವರೆಗೆ ‘ಆದಿಮ ಸಾಂಸ್ಕೃತಿಕ ಯಾನ–200’

ವಾರ್ತಾಭಾರತಿವಾರ್ತಾಭಾರತಿ25 Dec 2023 2:59 PM IST
share
ಕೋಲಾರ: ಡಿ.25 ರಿಂದ 27ರ ವರೆಗೆ ‘ಆದಿಮ ಸಾಂಸ್ಕೃತಿಕ ಯಾನ–200’

ಕೋಲಾರ: ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿ ಸೋಮವಾರದಿಂದ ಮೂರು ದಿನ ‘ಆದಿಮ ಸಾಂಸ್ಕೃತಿಕ ಯಾನ–200’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಉದ್ಘಾಟಿಸಿದರು. ಬುಧವಾರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಇದು ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಹಾಗೂ ಆದಿಮಕ್ಕೆ ಹೊಸದೊಂದು ಮೆರುಗು ತಂದುಕೊಡಲಿದೆ ಎಂದು ಕೇಂದ್ರದ ಅಧ್ಯಕ್ಷ ಎನ್‌.ಮುನಿಸ್ವಾಮಿ ಹೇಳಿದ್ದಾರೆ.

ದಕ್ಷಿಣ ಭಾರತದ ಪಂಚ ‌ರಾಜ್ಯಗಳ ಕಲಾಪ್ರಕಾರಗಳು ಸಮಾಗಮ, ವಿಚಾರ ವಿನಿಮಯ, ಸಂವಾದ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.

ಕಳೆದ ಒಂದುವರೆ ದಶಕದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಕಣ್ಮರೆಯಾಗಿರುವ ಸಾಂಸ್ಕೃತಿಕ ಸೆಲೆಗಳ ಹುಡುಕಾಟ ನಡೆಸುತ್ತಿದ್ದು, ಈ ಪಯಣದಲ್ಲಿ ಅದು ಕಂಡುಕೊಂಡ ಪ್ರಮುಖ ದಾರಿ ಹುಣ್ಣಿಮೆ ಹಾಡು, ಇದೀಗ ಆದಿಮ ಕೇಂದ್ರ ಇನ್ನೂರರ ಸಂಭ್ರಮದಲ್ಲಿದೆ.

ಈ ನೆಲ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ, ದಲಿತ, ರೈತ ಹಾಗೂ ಕಾರ್ಮಿಕ ಹೋರಾಟಗಳ ಇತಿಹಾಸದಲ್ಲೂ ತನ್ನದೇ ಛಾಪು ಮೂಡಿಸಿ ರಾಜ್ಯದ ಗಮನ ಸೆಳೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಡಿ.ವಿ ಗುಂಡಪ್ಪ, ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ಡಾ.ಚಂದ್ರಶೇಖರ್ ನಂಗಲಿ , ಪದ್ಮಾಲಯ ನಾಗರಾಜ್ ಸೇರಿದಂತೆ ಹಲವಾರು ಸಾಹಿತಿಗಳು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅದೇ ರೀತಿ ಇದೇ ನೆಲದಲ್ಲಿ ದಲಿತ ಚಳುವಳಿ ತನ್ನ ಉಚ್ರಾಯ ಸ್ಥಿತಿಯನ್ನು ತಲುಪಲು ಸಹಕಾರಿಯಾಗಿದೆ.

ಕಾರ್ಮಿಕ ಹೋರಾಟಗಳಿಗೆ ರಾಜ್ಯದಲ್ಲೇ ಕೆಜಿಎಫ್ ಗಣಿಕಾರ್ಮಿಕರ ಸಂಘಟನೆ ತನ್ನ ಮೊದಲ ಹೆಜ್ಜೆಯನ್ನಿಟ್ಟಿದೆ. ಇನ್ನೂ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ತತ್ವಜ್ಞಾನಿ ಗಟ್ಟಹಳ್ಳಿ ಆಂಜಿನಪ್ಪ, ಕಾಲಜ್ಞಾನಿ ಕೈವಾರ ನಾರಣಪ್ಪ ತಾತಯ್ಯನವರು, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ವೇಮಗಲ್ ನಾರಾಯಣಸ್ವಾಮಿ, ಮುನಿರೆಡ್ಡಪ್ಪ , ಡಿ.ಆರ್.ರಾಜಪ್ಪ, ಜಾನಪದ ಹುಂಜ ಮುನಿರೆಡ್ಡಿ, ಮೊದಲಾದವರು ಆಯಾ ಕಾಲಘಟ್ಟಕ್ಕೆ ತಕ್ಕಂತೆ ತಮ್ಮದೇ ಕೊಡುಗೆಗಳನ್ನು ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ಧಾರೆಯೆರೆದಿದ್ದಾರೆ.

ಬದಲಾದ ಸಾಮಾಜಿಕ ಸಾಂಸ್ಕೃತಿಕ ಸನ್ನಿವೇಶದಲ್ಲಿ ಚಳುವಳಿಗಳ ತವರೂರೆಂದೇ ಕರೆಸಿಕೊಂಡ ಕೋಲಾರದ ನೆಲ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಹಾಕಿತು. ಅದು ‘ಆದಿಮ ಸಾಂಸ್ಕೃತಿಕ ಕೇಂದ್ರ’ದ ಮೂಲಕ. ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಅವರ ಆಪ್ತಬಳಗ ಮೊದಲಿಗೆ ಆದಿಮ ಚಟುವಟಿಕೆಗಳನ್ನು ಪ್ರಾರಂಭಿಸಿತು. ಆರಂಭದಲ್ಲಿ ಪ್ರತಿಯೊಬ್ಬ ಸದಸ್ಯರು ದಿನಕ್ಕೊಂದು ರೂಪಾಯಿ ಹಣವನ್ನು ತಮ್ಮದೇ ಮನೆಯಲ್ಲಿ ಒಂದು ನೇಮದಂತೆ ಹಾಕುವ ಮೂಲಕ ತಿಂಗಳ ಎರಡನೇ ಶನಿವಾರ ಎಲ್ಲವನ್ನೂ ಕ್ರೂಡೀಕರಿಸಿ ಒಟ್ಟಿಗೆ ಒಂದೆಡೆಗೆ ತಂದು ಆದಿಮಕ್ಕೆ ನೀಡಲಾಗುತ್ತಿತ್ತು. ಹಣ ಸಂಗ್ರಹಣ ಹೆಚ್ಚಾದಂತೆ ಆದಿಮಕ್ಕೊಂದು ನೆಲ ಹುಡುಕಾಟ ನಡೆಯಿತು. ಆಗ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಶತಶೃಂಗಪರ್ವತದ ಮೇಲಿನ ತೇರಹಳ್ಳಿ ಸಮೀಪದ ಶಿವಗಂಗೆ ಗ್ರಾಮದ ವೆಂಕಟೇಶಪ್ಪ ಆದಿಮಕ್ಕೆ ಮೊದಲ ಬಾರಿಗೆ ನೆಲೆಯನ್ನು ಕಲ್ಪಿಸಿಕೊಳ್ಳಲು ಸಹಕರಿಸಿದರು.

೨೦೦೭ರಲ್ಲಿ ಮೊದಲ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ಆರಂಭಿಸಿದ ಆದಿಮ ನೋಡ ನೋಡುತ್ತಿದ್ದಂತೆ ಐವತ್ತಾಯಿತು, ನೂರಾಯಿತು, ನೂರ ಐವತ್ತಾಯಿತು ಇದೀಗ ಇನ್ನೂರರ ಗಡಿ ಮುಟ್ಟಿದೆ. ಹುಣ್ಣಿಮೆ ಹಾಡಿನ ಮುಖ್ಯ ಉದ್ದೇಶವೇ ಈ ಸಮಾಜದ ವಿವಿಧ ಸ್ಥರಗಳಲ್ಲಿ ಇರುವ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕಲಾವಿದರು, ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಗದ್ದುಗೆ ಗೌರವ ಸಲ್ಲಿಸುವುದು. ಅದೇ ರೀತಿ ಬೆಳಕಿಗೆ ಬಾರದೆ ಇರುವ ಸಾವಿರಾರು ಪ್ರತಿಭೆಗಳಿಗೆ ಆದಿಮ ಅವಕಾಶ ಕಲ್ಪಿಸುವ ಮೂಲಕ ಆ ಪ್ರತಿಭೆಗಳನ್ನು ಮುನ್ನೆಲೆಗೆ ತರುವುದಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೂ 199 ಹುಣ್ಣಿಮೆಗಳನ್ನು ಪೂರೈಸಿರುವ ಆದಿಮ ಸಾವಿರಾರು ದೇಶ ವಿದೇಶ ಹಾಗೂ ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಈ ಪಟ್ಟಿಯಲ್ಲಿ ಬರ‍್ರಕಥ ಈರಮ್ಮಾಜೀ ಅವರಿಂದ ಹಿಡಿದು ಭೀಮ್ ರಾವ್ ಗಸ್ತಿ, ಪದ್ಮಶ್ರೀ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪನವರ ವರೆಗೂ ನಾಡಿನ ಅಸಂಖ್ಯಾತ ಕಲಾವಿದರಿಗೆ ಆದಿಮ ಗೌರವ ಸಲ್ಲಿಸಿದೆ.

ಇದೀಗ 200ನೇ ಹುಣ್ಣಿಮೆ ಹಾಡು ಸಮೀಪಿಸಿದ್ದು,ಡಿ.25ರಿಂದ ಡಿ 27ರವರೆಗೆ ಮೂರು ದಿನಗಳ ಕಾಲ ನಡೆಯುವ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನ-200 ಕಾರ್ಯಕ್ರಮದಲ್ಲಿ ಈ ಬಾರಿ ಹಲವು ವಿಶೇಷತೆಗಳಿವೆ. ಮೊದಲ ದಿನ ನಾಡಿನ ಹೆಸರಾಂತ ಸಾಹಿತಿಗಳಿಂದ ವಿವಿಧ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಸಂಜೆ ವೇಳೆ ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ಇದ್ದೇ ಇರುತ್ತದೆ.

ಈ ಬಾರಿ ವಿಶೇಷವಾಗಿ ಕರ್ನಾಟಕದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾರೋಪ ಸಮಾವೇಶ ನಡೆಸಿಕೊಡಲಿದ್ದಾರೆ.

ಆದಿಮದ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿರುವ ಹಿನ್ನಲೆಯಲ್ಲಿ ಆದಿಮ ಕೇಂದ್ರವಂತೂ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.

ಸುದ್ದಿಗೋಷ್ಠಿಗಳಿಗೆ ಸುಸಜ್ಜಿತ ವೇದಿಕೆಗಳು ಒಂದೆಡೆ ಸಜ್ಜುಗೊಳ್ಳುತ್ತಿದ್ದರೆ ಮತ್ತೊಂದೆಡೆ ಕಲಾವಿದರಿಗಾಗಿ ಬಯಲು ರಂಗಮಂಟಪಗಳು ಮತ್ತೊಂದೆಡೆ ಸ್ವಚ್ಚಂದವಾಗಿ ಅಲಂಕೃತಗೊಂಡಿವೆ.

ನೆಲಸಂಸ್ಕೃತಿ ಪರಂಪರೆಯ ಮುಂದುವರಿದ ಭಾಗವಾಗಿ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನ -200 ಸಂಘಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂಚರಾಜ್ಯಗಳ ಜಾನಪದ ಕಲಾಪ್ರಕಾರಗಳು ಅನಾವರಣಗೊಳಿಸಲಾಗುತ್ತಿದೆ.

- ಎನ್.ಮುನಿಸ್ವಾಮಿ. ಅಧ್ಯಕ್ಷರು, ಆದಿಮ ಸಾಂಸ್ಕೃತಿಕ ಕೇಂದ್ರ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X