ಕೋಲಾರ | ಕಲ್ಲಿನ ಕ್ರಷರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತ್ಯು

ಸಾಂದರ್ಭಿಕ ಚಿತ್ರ
ಕೋಲಾರ | ಕಲ್ಲಿನ ಕ್ರಷರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಕ್ಷೇತ್ರೇನಹಳ್ಳಿ ಸಮೀಪ ನಡೆದಿದೆ.
ಮರತರನ್ನು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ನಂದಾ ಲಾಲ್ (35) ಎಂದು ಗುರುತಿಸಲಾಗಿದೆ.
ಕ್ಷೇತ್ರೇನಹಳ್ಳಿ ಸಮೀಪ ಗ್ರಾಮದ ವೆಂಕಟೇಶ್ ಗೌಡ ಎಂಬುವರಿಗೆ ಸೇರಿದ ಐಶ್ವರ್ಯ ಕ್ರಷರ್ ನಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ
ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮಾಸ್ತಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





