ಕನಕಗಿರಿ | ಶಾಸಕ ಯತ್ನಾಳ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಆರೋಪಿ ಬಂಧನ

ಕನಕಗಿರಿ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಹರಿಬಿಟ್ಟು ಊರು ತೊರೆದಿದ್ದ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದ ಹುಸೇನ್ ಭಾಷಾ ಎಂಬಾತನ ಮೇಲೆ ರವಿವಾರ ಪೊಲೀಸರು ಸುವೋ ಮೋಟೋ ಕೇಸ್ ದಾಖಲಿಸಿದ್ದಾರೆ.
ಶನಿವಾರದಂದು ಹುಸೇನ್ ಭಾಷಾ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಏಕವಚನ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.
ಈ ವಿಡಿಯೋ ಆಧರಿಸಿ ಪೊಲೀಸರು ಆರೋಪಿ ಹುಸೇನ್ ಭಾಷಾ ಅಲಿಯಾಸ್ ಹುಸೇನಿ ಮೇಲೆ ಸೆಕ್ಷನ್ 353 (1) (ಸಿ) ಹಾಗೂ 353 (2) ಬಿಎನ್‌ಸ್ ಕಾಯಿದೆ 23 ಅಡಿ ಸುವೋ ಮೋಟೋ ಕೇಸ್ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Next Story





