ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಮರನಾಥ್ ಜಾರಕಿಹೊಳಿ

ಕನಕಗಿರಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಅಶ್ವಿನಿ ಅಮರನಾಥ್ ಜಾರಕಿಹೊಳಿ ಅವರು ಶನಿವಾರ ಭೇಟಿ ನೀಡಿ ಶ್ರೀ ಕನಕಾಚಲಪತಿ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ್ ನಾಯಕ ಅವರು ಕನಕಾಚಲಪತಿ ದೇಗುಲದ ಪಂಚಗೋಪುರಗಳ ವೈಶಿಷ್ಟ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ದೇಗುಲದ ಐತಿಹಾಸಿಕ ಹಾಗೂ ಶಿಲ್ಪಕಲಾ ವೈಭವವನ್ನು ಅವರು ವಿವರಿಸಿದರು.
ಭೇಟಿಯ ವೇಳೆ ಯುವ ಮುಖಂಡರಾದ ನಂದು ನಾಯಕ, ಸಚಿನ್, ಆನಂದ ಹುಲಿಹೈದಾರ, ಪುನೀತ್ ಬೊಂಡಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story





