ಮಾಲಿನ್ಯ ನಿಯಮ ಉಲ್ಲಂಘನೆ ಆರೋಪ : ಕೊಪ್ಪಳದ 8 ಕಾರ್ಖಾನೆಗಳು ಬಂದ್

ಸಾಂದರ್ಭಿಕ ಚಿತ್ರ | Photo credit : AI chatgpt
ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ವಾಯು ಕಾಯ್ದೆ ಹಾಗೂ ಜಲ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದ ಎಂಟು ಕಾರ್ಖಾನೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಬಂದ್ ಮಾಡಲಾಗಿದೆ.
ಪರಿಸರ ನಿಯಮಗಳನ್ನು ಉಲ್ಲಂಘಿಸಿ ಮಾಲಿನ್ಯ ಉಂಟುಮಾಡುತ್ತಿದ್ದ ಈ ಕಾರ್ಖಾನೆಗಳ ವಿರುದ್ಧ ರೈತರು ನಿರಂತರವಾಗಿ ದೂರು ನೀಡುತ್ತಿದ್ದರು. ಈ ಕುರಿತು ‘ವಾರ್ತಾ ಭಾರತಿ’ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲೇ ಮಂಡಳಿ ಕ್ರಮ ಕೈಗೊಂಡಿದೆ.
ಮಂಡಳಿಯ ಆದೇಶದಂತೆ ಬಂದ್ ಮಾಡಲಾಗಿರುವ ಕಾರ್ಖಾನೆಗಳಲ್ಲಿ ಐಎಲ್ಸಿ ಐರನ್ ಪ್ರೈವೇಟ್ ಲಿಮಿಟೆಡ್, ಪಿಬಿಎಸ್ ಸ್ಟೀಲ್ ಯೂನಿಟ್, ಎಎಸ್ಕೆ ಸ್ಟೀಲ್ ಫ್ಯಾಕ್ಟರಿ, ತನುಷ್ ಇಸ್ಪಾತ್ ಪ್ರೈವೇಟ್ ಲಿಮಿಟೆಡ್ನ ಯೂನಿಟ್ 1 ಮತ್ತು ಯೂನಿಟ್ 2, ಬಾಬಾ ಅಖಿಲಾ, ಭದ್ರಾ ಶ್ರೀ ಸ್ಟೀಲ್ ಹಾಗೂ ಧ್ರುವ ದೇಶಾ ಮೆಟಾ ಸ್ಟೀಲ್ ಕಾರ್ಖಾನೆಗಳು ಸೇರಿವೆ.
Next Story




