ಅಂಜನಾದ್ರಿ: 12 ಅಂಗಡಿಗಳಿಂದ ಕಳ್ಳತನ

ಕೊಪ್ಪಳ/ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ: 12 ಅಂಗಡಿಗಳಲ್ಲಿ ಕಳ್ಳತನಬೆಟ್ಟದ ರಸ್ತೆಯ ಪಕ್ಕದಲ್ಲಿ ಸಣ್ಣ ಬಂಡಿಯಲ್ಲಿ ಇರುವ 12 ಅಂಗಡಿಗಳ ಬೀಗ ಮುರಿದು ಸಾಮಗ್ರಿಗಳು ಮತ್ತು ಹಣ ಕಳ್ಳತನ ಮಾಡಲಾಗಿರುವ ಬಗ್ಗೆ ವರದಿಯಾಗಿದೆ.
ರವಿವಾರ ರಾತ್ರಿ ಅಂಗಡಿ ಮಾಲೀಕರು ತಮ್ಮ ವ್ಯಾಪಾರವನ್ನು ಮುಗಿಸಿ ಅಂಗಡಿಗಳಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಅಂಗಡಿಗೆ ಬಾಗಿಲು ತೆರಯಲು ಹೋದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಒಟ್ಟು 12 ಅಂಗಡಿಗಳಲ್ಲಿ 12 ಸಾವಿರ ನಗದು, 70ಕ್ಕೂ ಹೆಚ್ಚು ಕೇಸರಿ ಶಾಲು ಸೇರಿ ಇತರೆ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನಾ ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸ್ ಪಡೆಯ ಪೊಲೀಸರು ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ.
Next Story





