ಗಂಗಾವತಿ | ಹಳ್ಳಕ್ಕೆ ಬಿದ್ದು 6 ವರ್ಷದ ಬಾಲಕ ಮೃತ್ಯು

ಗಂಗಾವತಿ: ಆಟವಾಡುತ್ತಿದ್ದ ವೇಳೆ 6 ವರ್ಷದ ಬಾಲಕ ಕಾಲು ಜಾರಿ ಹಳ್ಳಕ್ಕೆ ಬಿದ್ದುಮೃತಪಟ್ಟಿರುವ ಘಟನೆ ಇಂದು ನಗರದ 6ನೇ ವಾರ್ಡ್‌ನ ಮಹಬೂಬ್ ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಆಜಾನ್ ಎಂದು ಗುರುತಿಸಲಾಗಿದೆ. ಮನೆ ಪಕ್ಕದಲ್ಲೇ ಇರುವ ಹಳ್ಳದ ಬಳಿ ಆಟವಾಡುತ್ತಿದ್ದ ಆಜಾನ್ ಹಳ್ಳಕ್ಕೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸೇತುವೆಯ ತಡೆಗೋಡೆ ನಿರ್ಮಿಸದೇ ಇರುವುದೇ ಕಾರಣ ಎಂದು ತಿಳಿದು ಬಂದಿದ್ದು, ಇದಕ್ಕು ಮುಂಚೆ ನಗರದ ನಿವಾಸಿಗಳು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರೂ, ಆದರೆ ತಡೆಗೊಡೆಯನ್ನು ನಿರ್ಮಿಸಿರಲಿಲ್ಲ. ಈ ಘಟನೆಗೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಮತ್ತು ವಾರ್ಡ್ ಸದಸ್ಯರು ನೀಡಿ ಪರಿಶೀಲನೆ ನಡೆಸಿದರು.
Next Story





