ಗಂಗಾವತಿ: ಕಾಲುವೆಗೆ ಮಗುಚಿ ಬಿದ್ದ ಲಾರಿ; ನೋಡಲು ಹೋಗಿದ್ದ ಯುವಕ ನೀರುಪಾಲು

ಕೊಪ್ಪಳ : ಭತ್ತ ಕೊಯ್ಯುವ ಯಂತ್ರ ಒಯ್ಯುತ್ತಿದ್ದ ಲಾರಿ ತುಂಗಭದ್ರಾ ಎಡದಂಡೆ ಕಾಲುವೆಗೆ ಮಗುಚಿದ್ದು, ವೀಕ್ಷಿಸಲು ಹೋದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮದ ಬಳಿ ನಡೆದಿದೆ.
ನಾಗೇಶ ಉಪ್ಪಾರ ಎಂಬಾತ ನೀರುಪಾಲಾದ ಯುವಕ. ಕೇಸರಹಟ್ಟಿ ಗ್ರಾಮದ ಬಸವರಾಜ್ ಹಳ್ಳಿಯವರಿಗೆ ಸೇರಿದ್ದ ಭತ್ತ ಕೊಯ್ಯುವ ಯಂತ್ರವನ್ನು ಹೊತ್ತೊಯ್ಯುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ತುಂಗಭದ್ರಾ ಎಡದಂಡೆ ಕಾಲುವೆಗೆ ಉರುಳಿದೆ. ಕೂಡಲೇ ಚಾಲಕ ಮಹಿಬೂಬ್ ಹಾಗೂ ಇನ್ನೊಬ್ಬ ವ್ಯಕ್ತಿ ಲಾರಿ ಉರುಳುತ್ತಿದ್ದಂತೆಯೇ ಜಿಗಿದು ಪಾರಾಗಿದ್ದಾರೆ. ಇದೇ ಸಂದರ್ಭದಲ್ಲಿ ನಾಗೇಶ ಉಪ್ಪಾರ ಲಾರಿ ಬಿದ್ದಿರುವುದನ್ನು ವೀಕ್ಷಿಸಲು ಹೋಗಿ ನೀರುಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಾಲುವೆಗೆ ಬಿದ್ದಿದ್ದ ಲಾರಿ ಮತ್ತು ಭತ್ತ ಕೊಯ್ಯುವ ಯಂತ್ರವನ್ನು ಮೇಲಕ್ಕೆ ಎತ್ತಲಾಗಿದ್ದು, ಯುವಕನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Next Story





