ಗಂಗಾವತಿ | ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ : ತಂದೆ, ಮಗಳು ಮೃತ್ಯು

ಗಂಗಾವತಿ : ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿಯಾಗಿ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ರಸ್ತೆಯ ಡಣಾಪುರ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಗಂಗಾವತಿ ತಾಲೂಕಿನ ಡಣಾಪುರ ನಿವಾಸಿಗಳಾದ ಗಾರೆ ಕೆಲಸ ಮಾಡುತ್ತಿದ್ದ ಖಾಜಾಸಾಬ್ (55) ಮತ್ತು ಅವರ ಪುತ್ರಿ, 8ನೇ ತರಗತಿ ವಿದ್ಯಾರ್ಥಿನಿ ಆಸೀನ್ ಖಾಜಾಸಾಬ್ (14) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ದಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ರಂಗಪ್ಪ ದೊಡ್ಡಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





