ಕೊಪ್ಪಳ | ಜಿಲ್ಲಾ ಉಸ್ತುವಾರಿ ಸಚಿವರಿಂದ ಕನಕಗಿರಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ

ಕನಕಗಿರಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಮಂಗಳವಾರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ ಅವರು, ಬಡವರಿಗೆ, ಕೂಲಿಕಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿಆಹಾರ ದೊರಕಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಇಲ್ಲಿಗುಣಮಟ್ಟದ ಆಹಾರ ಪೂರೈಕೆ ಜತೆಗೆ ಸ್ವಚ್ಛತೆ ಕಾಪಾಡಬೇಕು. ಶಾಲಾ - ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು , ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ಕ್ಯಾಂಟೀನ್ ನಿಂದ ಅನುಕೂಲವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯ ವಿರೇಶ ಸಮಗಂಡಿ, ಮಾಜಿ ತಾಪಂ ಅಧ್ಯಕ್ಷ ಬಸವಂತ ಗೌಡ, ಮಲ್ಲಿಕಾರ್ಜುನ ಗೌಡ ಪಪಂ ಅಧ್ಯಕ್ಷೆ ಹಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯ ಸಂಗಪ್ಪ ಸಜ್ಜನ, ಅನಿಲ್ ಬಿಜ್ಜಾಳ, ಹನುಮಂತ ಬಸರಿಗಿಡದ, ಸಿದ್ದೇಶ ಕೆ., ರಾಕೇಶ ಕಂಪ್ಲಿ, ಶರಣೇಗೌಡ, ರಾಜಸಾಬ ನಂದಪೂರ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಓ ರಾಜಶೇಖರ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ, ಸಿಡಿಪಿಓ ವಿರುಪಾಕ್ಷಯ್ಯ, ತಾಲುಕು ಗ್ಯಾಂರಟಿ ಸಮಿತಿ ಅಧ್ಯಕ್ಷ ಹಝರತ್ ಹುಸೇನ್ , ಪ್ರಮುಖರಾದ ಸಿದ್ದಪ್ಪ ನಿರಲೂಟಿ, ರವಿ ಪಾಟೀಲ್, ಶರಣಬಸಪ್ಪ ಭತ್ತದ್, ಸಹಾಯಕ ವಿಷಯ ನಿರ್ವಕ ಮಂಜುನಾಥ ನಾಯಕ ಇತರರು ಇದ್ದರು. ಪ್ರಭು ವಸ್ತ್ರದ್ ನಿರೂಪಿಸಿದರು,







