Kanakagiri | ಬೆನಕನಾಳ ಸರ್ಕಾರಿ ಶಾಲೆಗೆ 1 ಎಕರೆ ಭೂ ದಾನ

ಕನಕಗಿರಿ: ತಾಲ್ಲೂಕಿನ ಬೆನಕನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ ಅವರು ತಮ್ಮ ಹೆಸರಿನಲ್ಲಿರುವ 1 ಎಕರೆ ಭೂಮಿಯನ್ನು ಸರ್ಕಾರಿ ಶಾಲೆಗೆ ದಾನ ಮಾಡುವುದಾಗಿ ಘೋಷಿಸಿ, ಪಹಣಿ ದಾಖಲೆಯನ್ನು ಶಾಲೆಗೆ ಹಸ್ತಾಂತರಿಸಿದರು. ಈ ಭೂಮಿಯನ್ನು ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಿಸುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಸದಸ್ಯ ಮಲ್ಲಿಕಾರ್ಜುನಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಹುಲಿಯಾಪುರ, ಉಪಾಧ್ಯಕ್ಷೆ ಲಕ್ಷ್ಮಿ ಹುಲಗಪ್ಪ, ಮುಖ್ಯ ಶಿಕ್ಷಕ ಅಶೋಕ ಬಾಲಪ್ಪನವರ, ಶಿಕ್ಷಕಿ ರೇಣುಕಾ ಹಾಗೂ ಪ್ರಮುಖರಾದ ಮಲ್ಲಯ್ಯ ಸ್ವಾಮಿ, ಶರಣಪ್ಪ ಸೇರಿದಂತೆ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
Next Story




