ಕನಕಗಿರಿ | ಬಸರಿಹಾಳದಲ್ಲಿ ಶೆಡ್‌ನಲ್ಲಿದ್ದ 30 ಕುರಿಗಳ ಕಳ್ಳತನ : ಪ್ರಕರಣ ದಾಖಲು

ಕನಕಗಿರಿ: ನಗರದ ಸಮೀಪದ ಬಸರಿಹಾಳ ಸೀಮೆಯ ಸರ್ವೆ ನಂ.38ರಲ್ಲಿ ಶೆಡ್ ನಲ್ಲಿದ್ದ 30 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಕನಕಾಪುರ ಗ್ರಾಮದ ದುರಗಪ್ಪ ಮುರುಡಿ ಎಂಬ ಕುರಿಗಾಯಿಗೆ ಈ ಕುರಿಗಳು ಸೇರಿವೆ ಎಂದು ತಿಳಿದು ಬಂದಿದೆ.
ಮಳೆ ಸುರಿದ ಹಿನ್ನೆಲೆಯಲ್ಲಿ 250 ಕುರಿಗಳನ್ನು ಶೆಡ್ ನಲ್ಲಿ ಬಿಟ್ಟು ಸುತ್ತಲೂ ತಂತಿ ಬೇಲೆ ಹಾಕಿ ಮುರುಡಿ ಅವರು ಮನೆಯಲ್ಲಿ ಮಲಗಲು ಹೋದಾಗ ಈ ಕಳ್ಳತನ ನಡೆದಿದೆ. ಭಾನುವಾರ ನಸುಕಿನಲ್ಲಿ ಕುರಿಶೆಡ್ ಗೆ ಬಂದಾಗ ತಂತಿ ಬೇಲಿ ಬಿಚ್ಚಿರುವುದು ಕಂಡು ಕುರಿಗಳನ್ನು ಎಣಿಕೆ ಮಾಡಿದಾಗ 30 ಕುರಿಗಳು ಇರಲಿಲ್ಲ, ಸುತ್ತಾಡಿ ಹುಡುಕಿದರೂ ಕುರಿಗಳು ಸಿಗದ ಕಾರಣ ಪೊಲೀಸ್ ಠಾಣೆಗೆ ಮುರುಡಿ ಅವರು, ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





