ಕನಕಗಿರಿ | ಬಾಣಂತಿ ಮೃತ್ಯು

ಸಾಂದರ್ಭಿಕ ಚಿತ್ರ
ಕನಕಗಿರಿ: ಇಲ್ಲಿನ ನಾಲ್ಕನೇ ವಾರ್ಡ್ ನಿವಾಸಿ ಮಹೇಕಾ ಅಗರಬತ್ತಿ (22) ಎಂಬ ಮಹಿಳೆ ಹೆರಿಗೆಯಾದ ನಂತರ ಮೃತಪಟ್ಟ ಘಟನೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.
ಹೆರಿಗೆ ನಿಮಿತ್ತ ತವರು ಮನೆಯಾದ ಸಿಂಧನೂರಿಗೆ ಹೋಗಿದ್ದ ಮಹೇಕಾ ಅವರಿಗೆ ಶುಕ್ರವಾರ ರಾತ್ರಿ ಕಾಲುಗಳಿಗೆ ಬಾವು ಬಂದ ಪರಿಣಾಮ ತಪಾಸಣೆಗಾಗಿ ಸಿಂಧನೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ರಕ್ತ ತಪಾಸಣೆ ನಡೆಸಿದಾಗ ಅಧಿಕ ರಕ್ತದೊತ್ತಡ ಹಾಗೂ ಕಾಮಾಲೆ ರೋಗ ಇರುವುದು ಪತ್ತೆಯಾಗಿದೆ.
ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ರಕ್ತದೊತ್ತಡ ಏರುಪೇರಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಬೆಳಿಗ್ಗೆ ಗಂಗಾವತಿಯ ರಸ್ತೆಯ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Next Story





