ಕನಕಗಿರಿ | ಭೀಮಾ ಕೋರೆಂಗಾವ್ ಯುದ್ದ ದಲಿತರ ಸ್ವಾಭಿಮಾನಕ್ಕಾಗಿ ರಕ್ತ ಹರಿಸಿದ ಸುದಿನವಾಗಿದೆ : ಅರಳಿಗನೂರು

ಕನಕಗಿರಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 208ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಗುರುವಾರ ಆಚರಿಸಲಾಯಿತು.
ದಲಿತ ಮುಖಂಡ ಪ್ರಗತಿಪರ ಹೋರಾಟಗಾರ ಪಾಮಣ್ಣ ಅರಳಿಗನೂರು ಮಾತನಾಡಿ, ಭೀಮಾ ಕೋರೆಂಗಾವ್ ಯುದ್ದ ದಲಿತರ ಸ್ವಾಭಿಮಾನಕ್ಕಾಗಿ ರಕ್ತ ಹರಿಸಿದ ಸುದಿನವಾಗಿದೆ. ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆ, ಮೂಡನಂಬಿಕೆಗಳ ವಿರುದ್ದ ಹೋರಾಡಿ ವಿಜಯ ಸಾಧಿಸಿದ ವಿಜಯದ ದಿನ ಭೀಮಕೋರೆಂಗಾವ್ ಯುದ್ದವಾಗಿದೆ ಎಂದರು.
ಪಟ್ಟಣ ಪಂಚಾಯತ್ ಹಂಗಾಮಿ ಅಧ್ಯಕ್ಷ ಕಂಠಿ ರಂಗ ನಾಯಕ, ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ದಲಿತ ಮುಖಂಡರಾದ ಲಿಂಗಪ್ಪ ಪೂಜಾರ, ನಾಗೇಶ ಪೂಜಾರ, ನೀಲಕಂಠ ಬಡಿಗೇರ್, ಯುವ ಮುಂದಾಳು ಅನ್ನು ಚಳ್ಳಮರದ್ ಇದ್ದರು.
Next Story





