ಕನಕಗಿರಿ: ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಕಂಬದಲ್ಲಿ ಬೆಂಕಿ

ಹಳೆಯ ವಿದ್ಯುತ್ ಕಂಬಗಳನ್ನು ತಪಾಸಣೆಗೆ ಸ್ಥಳೀಯರ ಒತ್ತಾಯ
ಕನಕಗಿರಿ: ಪಟ್ಟಣದ ಪಿಂಜಾರ ಓಣಿಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಕಂಬದಲ್ಲಿ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಯಿತು.
ನಾನಸಾಬ ಅವರ ಮನೆಯ ಸಮೀಪ ಇರುವ ವಿದ್ಯುತ್ ಕಂಬದ ತಂತಿಗಳು ಪರಸ್ಪರ ತಗುಲಿದ ಪರಿಣಾಮ ರಾತ್ರಿ ಸುಮಾರು 2:40ರ ವೇಳೆಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ಕಂಬದ ಮೇಲ್ಭಾಗದಲ್ಲಿ ಕಿಡಿ ಹೊತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ.
ಸ್ಥಳೀಯರು ತಕ್ಷಣವೇ ನೀರು ಎರಚಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಈ ಹಿನ್ನೆಲೆಯಲ್ಲಿ ವಾರ್ಡ್‌ನಲ್ಲಿರುವ ಹಳೆಯ ವಿದ್ಯುತ್ ಕಂಬಗಳನ್ನು ತಪಾಸಣೆ ಮಾಡಿ ಅವುಗಳನ್ನು ಬದಲಾಯಿಸುವಂತೆ ಶೇಖಹುಸೇನ, ಹಸೇನಸಾಬ, ದಾದಪೀರ ಗೋರಳ್ಳಿ ಸೇರಿದಂತೆ ಸ್ಥಳೀಯರು ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Next Story




