Kanakagiri | ಜ್ಯೋತಿ ಬಾಫುಲೆ ಭಾರತದ ಶ್ರೇಷ್ಠ ಸಮಾಜ ಸುಧಾರಕ : ಡಾ.ಎರಿಸ್ವಾಮಿ ಎಚ್.

ಕನಕಗಿರಿ: ಮಹಾತ್ಮ ಜ್ಯೋತಿ ಬಾಫುಲೆ ಅವರು 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಗ್ರಗಣ್ಯ ಸ್ಥಾನದಲ್ಲಿ ನಿಂತಿದ್ದಾರೆ ಎಂದು ತಾವರಗೇರಾ ಬುದ್ಧ ವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಡಾ.ಎರಿಸ್ವಾಮಿ ಎಚ್. ಹೇಳಿದರು.
ಇಲ್ಲಿನ ಪಂಪ್ಪಣ್ಣ ಶರಣಪ್ಪ ಗುಗ್ಗಳಶೇಟ್ರ ಕಾಲೇಜಿನಲ್ಲಿ ಭಾನುವಾರ ನಡೆದ ಶಿಕ್ಷಣ ಕ್ರಾಂತಿಯ ರೂವಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ 199ನೇ ಜನ್ಮ ಜಯಂತಿ, ವಿಶೇಷ ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಫುಲೆ ಅವರು ಕೇವಲ ಶಿಕ್ಷಣ ತಜ್ಞರಾಗಿರದೆ, ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರು. ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ನೀಡಿ, ಅವರನ್ನು ದೇಶದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದರು. ಸಮಾಜದ ತೀವ್ರ ವಿರೋಧದ ನಡುವೆಯೂ ಈ ದಂಪತಿಗಳು ಶೋಷಿತರ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದು ತಿಳಿಸಿದರು.
ಪ್ರಾಂಶುಪಾಲ ಬಜರಂಗ ಬಲಿ ಮಾತನಾಡಿದರು.
ಕುಷ್ಟಗಿ ವಕೀಲರಾದ ಬೆಟ್ಟಪ್ಪ ಯತ್ನಟ್ಟಿ ಬಸವಂತಪ್ಪ ಚೌವ್ಹಾಣ ಪ್ರಾಧ್ಯಪಕ ರಕ್ಷಿತ್.ಎ, ವೀರೇಶ್ ಕೆಂಗಲ್, ಸರ್ವಮಂಗಳಮ್ಮ.ಟಿ.ಆರ್, ಹಿರಿಯ ಉಪನ್ಯಾಸಕ ಅಮರೇಶ ವೆಂಕಟಾಪುರ, ವಿನಯ್ ಕುಮಾರ್, ವಿಜಯ್ ಸರೋದೆ, ಬಸವರಾಜ್ ಚಿಗರಿ, ಹಲಿಗೆಮ್ಮ, ಬೋರಯ್ಯ ಸೇರಿದಂತೆ ಇತರರು ಇದ್ದರು.
ಬಾಲಪ್ಪ ಕುರಿ ನಿರೂಪಿಸಿದರು, ವಿದ್ಯಾರ್ಥಿನಿ ಮೀನಾಕ್ಷಿ ಪ್ರಾಥಿಸಿದರು, ಸಂಗಮೇಶ್ ಸ್ವಾಗತಿಸಿದರು.







