ಕನಕಗಿರಿ | ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ಇಲ್ಲದಿದ್ದರೆ ದಂಡ: ಲಕ್ಷ್ಮಣ ಕಟ್ಟಿಮನಿ
ಕನಕಗಿರಿ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲ ಖಾಲಿ ನಿವೇಶನಗಳಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತರಾದ ಲಕ್ಷ್ಮಣ ಕಟ್ಟಿಮನಿ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಳೆಗಾಲ ಶುರುವಾಗಿರುವುದರಿಂದ ಗಿಡಮರಗಳು ಮತ್ತು ಕಂಟೆಗಳು ಖಾಲಿ ಜಾಗದಲ್ಲಿ ಬೆಳೆಯುತ್ತವೆ. ಇದರಿಂದ ಹಲವಾರು ವಿಷ ಜಂತುಗಳು, ಹಂದಿಗಳು, ನಾಯಿಗಳು, ದನ ಕರಗಳು ನಿವೇಶಗಳಲ್ಲಿ ವಾಸು ಮಾಡುತ್ತವೆ. ಇದರಿಂದ ಅಕ್ಕ ಪಕ್ಕದಲ್ಲಿ ವಾಸಿಸುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತವೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂತಹ ವಾರ್ಡ್ ನಂ. 1 ರಿಂದ 17 ರವರೆಗಿನ ಎಲ್ಲಾ ಖಾಲಿ ನಿವೇಶನದ ಮಾಲಕರು ತಮ್ಮ ನಿವೇಶನಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ತಪ್ಪಿದ್ದಲ್ಲಿ ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕಾರ ದಂಡ ವಿಧಿಸಲಾಗುವುದೆಂದು ತಿಳಿಸಿದ್ದಾರೆ.
Next Story





