Kanakagiri | ಜ್ಞಾನವೇ ಮುಕ್ತಿಯ ಮಾರ್ಗ : ಕನಕಪ್ಪ ನಾಯಕ

ಶಂಕರಾಚಾರ್ಯರ ಜಯಂತಿ ಆಚರಣೆ
ಕನಕಗಿರಿ: ಶ್ರೀ ಶಂಕರಾಚಾರ್ಯರು ಕೇವಲ ಧಾರ್ಮಿಕ ಸಂತ ಮಾತ್ರವಲ್ಲ, ಇಡೀ ಭಾರತವನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸಿದ ರಾಷ್ಟ್ರ ನಿರ್ಮಾತೃರಾಗಿದ್ದಾರೆ ಎಂದು ಪಟ್ಟಣ ಪಂಚಾಯತ್ ಕಂದಾಯ ನಿರೀಕ್ಷಕ ಕನಕಪ್ಪ ನಾಯಕ ಹೇಳಿದರು.
ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. “ಅತಿಥಿ ದೇವೋ ಭವ” ಎಂಬ ಭಾರತೀಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಚಿಂತಕರಲ್ಲಿ ಶಂಕರಾಚಾರ್ಯರು ಪ್ರಮುಖರು ಎಂದು ಹೇಳಿದರು.
ಇಂದಿನ ಯುವ ಪೀಳಿಗೆ “ಜ್ಞಾನವೇ ಮುಕ್ತಿಯ ಮಾರ್ಗ” ಎಂಬ ಅವರ ಸಂದೇಶವನ್ನು ಅರಿತು, ವ್ಯಸನಗಳಿಂದ ದೂರವಿದ್ದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ತಿಳಿಸಿದರು.
ಕರ ವಸೂಲಿಗಾರ ಕೇಶವ, ದ್ವಿತೀಯ ದರ್ಜೆ ಸಹಾಯಕ ಪ್ರಕಾಶ ಮಹಿಪತಿ, ಸಿಬ್ಬಂದಿಗಳಾದ ಆಂಜೀನಯ್ಯ, ಹರೀಶ, ಟಿಜೆ ವಿಜಯ, ವಿಜಯಲಕ್ಷ್ಮೀ, ಬಸವರಾಜ, ಬುಡನ್ ಸಾಬ, ಪ್ರಮುಖರಾದ ಶರಣಪ್ಪ ಪಲ್ಲವಿ, ಹರೀಶ ಪೂಜಾರ, ಬಸವರಾಜ ಕೋರಿ, ಮಂಜುನಾಥ ನಾಯಕ ಇತರರು ಇದ್ದರು.
Next Story




