ಕನಕಗಿರಿ | ಪಿಐ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಧರಣಿ

ಕನಕಗಿರಿ: ಪಟ್ಟಣದ ನಿವೇಶನದ ವಿವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಸವರಾಜರೆಡ್ಡಿ ಪ್ರಕರಣದಲ್ಲಿ ಪಿ.ಐ ವಿ. ನಾರಾಯಣ ಅಮಾನತು ಮಾಡಿರುವುದು ಖಂಡನೀಯ ಎಂದು ಮಾತಂಗ ಮಹಾಸಾಭಾದ ಸಂಚಾಲಕ ನಿಂಗಪ್ಪ ಪೂಜಾರ ತಿಳಿಸಿದರು.
ಪಿಐ ಅಮಾನತು ಆದೇಶ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪಟ್ಟಣ ಪಂಚಾಯಿತಿ ನಾಮ ನಿರ್ದೇಶಕ ಶಾಂತಪ್ಪ ಬಸರಿಗಿಡದ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಮುಖಂಡರಾದ ಯಲ್ಲಪ್ಪ ಕಟ್ಟಿಮನಿ,ನೀಲಕಂಠ ಬಡಿಗೇರ್, ಶಿವಕುಮಾರ ಈಚನಾಳ, ಶಾಂತಪ್ಪ ಬಸರಿಗಿಡದ, ಕಂಠೆಪ್ಪ ಮ್ಯಾಗಡೆ ಮಾತನಾಡಿದರು.
ಪಪಂ ಸದಸ್ಯ ಹನುಮಂತಪ್ಪ ಬಸರಿಗಿಡದ,ಮಾಜಿ ಸದಸ್ಯ ಸುಭಾಸ ಕಂದಕೂರು, ಅಶ್ರಯ ಸಮಿತಿ ಸದಸ್ಯ ಕನಕಪ್ಪ ಮ್ಯಾಗಡೆ, ತಿಮ್ಮಣ್ಣ ಬಡಿಗೇರ, ಉಮೇಶ ಬಡಿಗೇರ್, ಮಂಜುನಾಥ ಮ್ಯಾಗಡೆ, ವೆಂಕಟೇಶ ಪೂಜಾರ, ಸಣ್ಣ ದುರಗಪ್ಪ, ಇತರರು ಇದ್ದರು.
ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನೆ ಇಂದಿರಾನಗರ, ವಾಲ್ಮೀಕಿ ವೃತ್ತ, ಎಪಿಎಂಸಿ ಮಳಿಗೆ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿ ತಲುಪಿತು.
ತಹಶೀಲ್ದಾರ್ ಮೂಲಕ ಬಳ್ಳಾರಿ ವಲಯದ ಐಜಿಪಿ ಅವರಿಗೆ ಮನವಿ ಸಲ್ಲಿಸಲಾಯಿತು.
ನೂರಾರು ವಿದ್ಯಾರ್ಥಿನಿಯರು, ದಲಿತಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಕೈಯಲ್ಲಿ ನಾರಾಯಣ ಅವರ ಭಾವಚಿತ್ರ ಹಿಡಿದು ಅಮಾನತು ಆದೇಶ ಹಿಂಪಡೆಯಿರಿ ಎಂದು ಘೋಷಣೆ ಕೂಗಿದರು.






