Kanakagiri | ಉದ್ದ ಜಿಗಿತದಲ್ಲಿ ಶ್ರೀರಾಮ್‌ಗೆ ದ್ವಿತೀಯ ಸ್ಥಾನ: ರಾಜ್ಯ ಮಟ್ಟಕ್ಕೆ ಆಯ್ಕೆ

ಕನಕಗಿರಿ: ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ಶಾಲಾ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ವಸತಿ ಶಾಲೆಯ ವಿದ್ಯಾರ್ಥಿ ಶ್ರೀರಾಮ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಪ್ರಾಂಶುಪಾಲ ಶೇಖಪ್ಪ ಅರಶಣಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ರೀರಾಮ್‌ನ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕ ಬಾಬು ಎಸ್. ನಡುವಿನಮನಿ, ಶಿಕ್ಷಕರಾದ ಶರಣಪ್ಪ ಎಂ., ಅರುಣ ಪರಶುರಾಮ, ಝಾಕೀರಹುಸೇನ್ ನದಾಫ್, ಕನಕರಾಯ ಡಗ್ಗಿ, ಬಾಬರ್ ಪಾಷಾ, ಎಸ್.ಎಫ್. ಪಟೇಲ್, ಮಹೆಬೂಬ, ತಾಜುದ್ದೀನ್, ಸುಜಾತಾ, ದೇವೇಂದ್ರಪ್ಪ ಹಾಗೂ ಪಾಲಕ ಬಾಲನಗೌಡ ಅಭಿನಂದನೆ ಸಲ್ಲಿಸಿದ್ದಾರೆ.
Next Story




