ಪಪಂ ಹಂಗಾಮಿ ಅಧ್ಯಕ್ಷ ಕಂಠಿರಂಗ ನಾಯಕ ಅಧಿಕಾರ ಸ್ವೀಕಾರ

ಕನಕಗಿರಿ: ಪಟ್ಟಣದ ಪಪಂ ಹಂಗಾಮಿ ಅಧ್ಯಕ್ಷರಾಗಿ ಕಂಠಿರಂಗ ನಾಯಕ ಮಂಗಳವಾರ ಅಧಿಕಾರ ಸ್ವೀಕಾರಿಸಿದರು.
ಕನಕಗಿರಿ ಪಟ್ಟಣ ಪಂಚಾಯತ ನಿಕಟಪೂರ್ವ ಅಧ್ಯಕ್ಷೆ ಹುಸೇನಬಿ ಚಳ್ಳಮರದ್ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಕಂಠಿರಂಗ ಅಧಿಕಾರ ಸ್ವೀಕರಿಸಿದರು.
ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಬ್ಲಾಕ್ ಅಧ್ಯಕ್ಷ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವಿರೇಶ ಸಮಗಂಡಿ, ವಕ್ತಾರ ಶರಣಬಸಪ್ಪ ಭತ್ತದ, ಸದಸ್ಯ ಸಂಗಪ್ಪ ಸಜ್ಜನ,ಸಿದ್ದೇಶ ಕೆ, ಅನಿಲ್ ಬಿಜ್ಜಾಳ, ಶರಣೆಗೌಡ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ಹನುಮಂತ ಬಸರಿಗಿಡದ, ಪ್ರಮುಖರಾದ ಟಿಜೆ ರಾಮಚಂದ್ರ, ಅನ್ನು ಚಳ್ಳಮರದ, ಮಂಜುನಾಥ ನಾಯಕ, ಸುರೇಶ ಕುರುಗೋಡ ಹಾಗೂ ನಾಮನಿರ್ದೇಶನ,ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.
ಬಯಸದೇ ಬಂದ ಭಾಗ್ಯ
ಪಟ್ಟಣ ಪಂಚಾಯತಿ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಬಂದಿತ್ತು.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಐದನೇಯ ವಾರ್ಡ್ ಸದಸ್ಯ ಕಂಠಿರಂಗ ನಾಯಕ ಒಬ್ಬರೇ ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿರು ವುದರಿಂದ ನಾಯಕ ಅವರು ಉಪಾಧ್ಯಕ್ಷ ರಾಗುವುದು ಬಹುತೇಕ ಖಚಿತವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕೆಲವೊಬ್ಬರು ಲಕ್ಷಗಟ್ಟಲೆ ಖರ್ಚು ಮಾಡುವ ಕಾಲದಲ್ಲಿ ಬಯಸದೇ ಬಂದ ಭಾಗ್ಯ ಎಂದರು ತಪ್ಪಾಗಲಾರದು ಕನಕಗಿರಿ ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಸಾಹಯಕನಾಗಿ ಕೆಲಸ ಮಾಡುತ್ತಿರುವ ಕಂಠಿ ರಂಗ ನಾಯಕ ಐದನೇ ವಾರ್ಡಿನ ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದ. ಪ್ರಸ್ತುತ ಕಂಠಿ ನಾಯಕ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.







