Koppal | ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಂದ್: ಪೊಲೀಸರು–ಯುವಕರ ನಡುವೆ ವಾಗ್ವಾದ; ಆರೋಪ

ಕೊಪ್ಪಳ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಂದ್ ಮಾಡಿಸಿ ಗಣೇಶ ಮೂರ್ತಿಯನ್ನು ತ್ವರಿತವಾಗಿ ಮುಂದಕ್ಕೆ ಸಾಗಿಸಲು ಪೊಲೀಸರು ಒತ್ತಾಯಿಸಿದ ಹಿನ್ನೆಯಲ್ಲಿ ಮೆರವಣಿಗೆಯಲ್ಲಿ ಇದ್ದ ಜನರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಕೊಪ್ಪಳ ನಗರದಲ್ಲಿ 5ನೇ ದಿನದ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಡಿಜೆ ಧ್ವನಿವರ್ಧಕಗಳನ್ನು ಬಳಸಿದ್ದರಿಂದ ಮೆರವಣಿಗೆ ಜವಾಹರ್ ರಸ್ತೆ ಪ್ರವೇಶಿಸಿದಾಗ ಪೊಲೀಸರು ಡಿ.ಜೆ ಗಳನ್ನು ಜಿಲ್ಲೆಯಲ್ಲಿ ಬಳಸದಂತೆ ಜಿಲ್ಲಾಧಿಕಾರಿಗಳ ಆದೇಶ ಜಾರಿಯಲ್ಲಿ ಇರುವುದರಿಂದ ಮತ್ತು ಸುಪ್ರೀಂ ಕೋರ್ಟ್ ಆದೇಶದನ್ವಯ ಡಿಜೆ ಗಳನ್ನು ಬಂದ್ ಮಾಡಿಸಿದರು. ಇದರಿಂದ ಆಕ್ರೋಶಗೊಂಡ ಕೆಲ ಯುವಕರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿದ್ದ ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಯುವಕರನ್ನು ಸಮಾಧಾನಪಡಿಸಿ ಕಳುಹಿಸಿದರು.
Next Story




