ಕೊಪ್ಪಳ| ವಕೀಲನಿಗೆ ಅವಹೇಳನಕಾರಿಯಾಗಿ ನಿಂದಿಸಿದ ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಕೀಲರ ಸಂಘದಿಂದ ಕಲಾಪ ಬಹಿಷ್ಕಾರ

ಕೊಪ್ಪಳ: ವಕೀಲ ಎಸ್.ಎಂ.ಹುಸೇನಿಯವರಿಗೆ ಕುಷ್ಟಗಿ ನಗರ ಠಾಣೆಯ ಪಿಎಸ್ ಐ ಪುಂಡಪ್ಪ ಜಾಧವ್ ಅವಹೇಳನಾಕಾರಿಯಾಗಿ ನಿಂದಿಸಿದ್ದು, ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಕೊಪ್ಪಳ ವಕೀಲರ ಸಂಘ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪ್ರಕರಣವೊಂದಕ್ಕೆ ಸಂಬಧಿಸಿ ಮಾಹಿತಿ ಕೇಳುವ ಸಂದರ್ಭದಲ್ಲಿ ಕುಷ್ಟಗಿ ನಗರ ಠಾಣೆ ಪಿಎಸ್ ಐ ಪುಂಡಪ್ಪ ಜಾಧವ್ ಅವರು, ವಕೀಲ ಎಸ್.ಎಂ.ಹುಸೇನಿ ಮತ್ತು ಅವರ ಕಕ್ಷಿದಾರ ಶ್ಯಾಮೀದಸಾಬ ಇವರಿಗೆ ದೂರವಾಣಿ ಮೂಖಾಂತರ ಕರೆ ಮಾಡಿ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ವಕೀಲರ ಸಂಘ ಆರೋಪಿಸಿದೆ.
Next Story





