ಕೊಪ್ಪಳ | ನಿವೇದಿತಾ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ

ಕೊಪ್ಪಳ : ನಿವೇದಿತಾ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಎರಡು ದಿನಗಳ ಕಾಲ ಅಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪಠ್ಯಪುಸ್ತಕದಲ್ಲಿರುವ ವಿವಿಧ ಪ್ರಯೋಗಳ ಮಾದರಿ, ರೇಖಾಗಣಿತದ ಚಿತ್ರಗಳು ಮತ್ತು ಐತಿಹಾಸಿಕ ಕಟ್ಟಡಗಳ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ವಿಷಯವಾರು ತಯಾರಿಸಿದ್ದ ಮಾದರಿಗಳು ವಿದ್ಯಾರ್ಥಿಗಳಿಗೆ ಅರ್ಥಮಾಡಿಕೊಳ್ಳಲು ಬಹಳ ಸುಲಭವಾಗುವಂತೆ ಇದ್ದವು, ಇದು ಕೇವಲ ಶಾಲೆಗೆ ಮಾತ್ರ ಸೀಮಿತವಾಗಿರದೆ ಬೇರೆ ಶಾಲೆಯ ಮಕ್ಕಳು ಕೂಡ ಬಂದು ನೋಡಲು ವ್ಯವಸ್ಥೆ ಮಾಡಲಾಗಿತ್ತು.ಇಷ್ಟೇ ಅಲ್ಲದೇ ವಿದ್ಯಾರ್ಥಿ ಬಜಾರ್ ಮತ್ತು ಪುಡ್ ಫೆಸ್ಟ್ ಆಯೋಜಿಸಿ ಅದರಲ್ಲಿ ವಿದ್ಯಾರ್ಥಿಗಳು ವಿವಿಧ ಖಾಧ್ಯಗಳನ್ನು ಮತ್ತು ತಿನಿಸುಗಳನ್ನು ತಯಾರಿಸಿಕೊಂಡು ಬಂದು ಮಾರಾಟ ಮಾಡಿದರು, ಪಾಲಕರು ಕೂಡ ಖಾಧ್ಯ ಮತ್ತು ತಿನಿಸುಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಿದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಗೆ ವೇಶ ಭೂಷಣ ಸ್ಪರ್ಧೆ ಮತ್ತು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಮತ್ತು ಹಣ್ಣು ಹಾಗೂ ತರಕಾರಿಗಳಿಂದ ವಿಶೇಷ ಕಲೆಯನ್ನು ಪ್ರದರ್ಶಿಸುವ ಸ್ಪರ್ಧೆಗಳು ಇದ್ದವು. ಜೊತೆಗೆ ಜವಹಾರ್ ಲಾಲ್ ನೆಹರೂ ಅವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
"ನಮ್ಮ ಶಾಲೆಯ 25ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಕ್ಕಳ ದಿನಾಚರಣೆ ಇರುವುದರಿಂದ ನಾವು ಅದನ್ನು ವಿಶಿಷ್ಟವಾಗಿ ಆಚರಿಸಲು ಯೋಜಿಸಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಎರಡು ದಿನಗಳ ಕಾಲ ಆಯೋಜಿಸಿದ್ದೆವು, ಇದರಿಂದ ಮಕ್ಕಳು ಕಲಿಕೆಯ ಜೊತೆಗೆ ಮನೋರಂಜನೆಯನ್ನು ಪಡೆದರು. ವಿದ್ಯಾರ್ಥಿಗಳಿಗೆ ಅವರಲ್ಲಿನ ಕಲೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು" ಎಂದು ನಿವೇದಿತಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶಾರದಬಾಯಿ ಪುಲಸ್ಕರ್ ಹೇಳಿದರು.







