ಕೊಪ್ಪಳ| ಬಸವೇಶ್ವರ ದೇವಸ್ಥಾನದ ಗರ್ಭಗುಡಿ ಕಲ್ಲುಗಳಿಗೆ ಭಕ್ತರಿಂದ ಪೂಜೆ

ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶುಕ್ರವಾರ ದೇಗುಲದ ಗರ್ಭಗುಡಿಯ ನಿರ್ಮಾಣದ ಕಲ್ಲುಗಳನ್ನು ಭಕ್ತರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.
ಕಲ್ಲುಗಳನ್ನು ಹೊತ್ತು ತಂದಿದ್ದ ವಾಹನವನ್ನು ದೇಗುಲದವರೆಗೆ ಭಜನೆಯೊಂದಿಗೆ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸ ಹೊತ್ತು ಪಾದಯಾತ್ರೆ ಮೂಲಕ ದೇಗುಲದವರೆಗೆ ಬಂದರು. ದೇಗುಲದ ಜಾಗದಲ್ಲಿ ಕಲ್ಲುಗಳಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು.
ಈ ವೇಳೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ದೇವಸ್ಥಾನ ನಿರ್ಮಾಣದ ಮುಂದಾಳು ರವೀಂದ್ರ ಸಜ್ಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ ಹನುಮೇಶ ನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಾಸಾಬ ಕಟ್ಟಿಮನಿ, ಶಿವಶಂಕ್ರಪ್ಪ ಚೆನ್ನದಾಸರ ದೇವಸ್ಥಾನದ ಪ್ರಮುಖರಾದ ವಿಶ್ವನಾಥ ಸಜ್ಜನ, ನಾಗಪ್ಪ ಸಜ್ಜನ, ಶೇಖರಪ್ಪ ಗದ್ದಿ, ಮಲ್ಲಪ್ಪ ಸಜ್ಜನ್, ಅಮರೇಶ ಸಜ್ಜನ್, ಶಿವಕುಮಾರ್ ಸಜ್ಜನ್, ಶರಣಪ್ಪ ಸಜ್ಜನ್, ಗ್ರಾಮದ ಮುಖಂಡರಾದ ಗೋಸ್ಲೆಪ್ಪ ಗದ್ದಿ, ಅಮರಪ್ಪ ಗದ್ದಿ, ಹನುಮಂತಪ್ಪ ಗೋಡಿ, ಭಜನೆ ಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.





