ಕೊಪ್ಪಳ: ಗ್ರಾಂ ಪಂ. ನೌಕರನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿಯ ಬಂಧನ

ಕೊಪ್ಪಳ: ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ 17 ವರ್ಷದ ಬಾಲಕಿಯ ಮೇಲೆ ಗ್ರಾಮ ಪಂಚಾಯತಿ ನೌಕರನೊಬ್ಬ ಹಲ್ಲೆನಡೆಸಿ ಅತ್ಯಾಚಾರವೆಸಗಿದ ಘಟನೆ ರವಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಯಲಬುರ್ಗಾ ತಾಲೂಕಿನ ದೋಟಿಹಾಳ ಗ್ರಾಮ ಪಂಚಾಯತಿ ಕರವಸೂಲಿಗಾರ ಬೀರಪ್ಪ ಇಲಕಲ್ (27) ಎಂಬಾತ ಅತ್ಯಾಚಾರವೆಸಗಿದ ಆರೋಪಿ.
ಬಾಲಕಿಯನ್ನು ಹೊಲದಲ್ಲಿ ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಈ ಕುರಿತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬಾಲಕಿಯ ತಾಯಿ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕುಷ್ಟಗಿ ಸಿಪಿಐ ಅವರು ತಿಳಿಸಿದ್ದಾರೆ.
Next Story





