ಕೊಪ್ಪಳ | ಕೆಂಪೇಗೌಡರ ಆದರ್ಶ ಯುವಜನತೆಗೆ ದಾರಿದೀಪ: ಅಮರೇಶ್ ದೇವರಾಳ

ಕನಕಗಿರಿ: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ಕೆಂಪೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಕಾಲೇಜು ಪ್ರಾಚಾರ್ಯ ಅಮರೇಶ್ ದೇವರಾಳ ಮಾತನಾಡಿ, ಕೆಂಪೇಗೌಡರು ಕೇವಲ ಬೆಂಗಳೂರು ಕಟ್ಟಿದವರಲ್ಲ, ನಾಡಿನ ಸಂಸ್ಕೃತಿ ಕಟ್ಟಿದವರು. ಕೆರೆ-ಕಟ್ಟೆ, ದೇವಾಲಯ, ಮಾರುಕಟ್ಟೆ ನಿರ್ಮಿಸಿ ಜನಪರ ಆಡಳಿತ ನೀಡಿದ ದೂರದೃಷ್ಟಿಯ ನಾಯಕ. ಇಂದಿನ ಯುವ ಪೀಳಿಗೆ ಕೆಂಪೇಗೌಡರ ಆಡಳಿತ ವೈಖರಿ, ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಉಪನ್ಯಾಸಕ ಶಿವಪುತ್ರಪ್ಪ, ಗಾಳೆಪ್ಪ, ಶ್ರೀಮತಿ ಕುಮಾರಿ ರೇಖಾ, ಪಂಪಾರೆಡ್ಡಿ, ಹನುಮೇಶ ಗೌಡ, ಶಂಕರಗೌಡ, ಖೈರುನಿಸಾ, ಸಂಗೀತ, ವಿಜಯಲಕ್ಷ್ಮಿ, ಶಿವಶರಣ, ಹೊನ್ನೂರಪ್ಪ ನಾಯಕ, ಹನುಮೇಶ ಇದ್ದರು.
Next Story




