Koppal | ಮಲ್ಲಿಕಾರ್ಜುನಗೌಡಗೆ ಪಿಎಚ್ಡಿ ಪದವಿ

ಮಲ್ಲಿಕಾರ್ಜುನಗೌಡ ವಿರುಪಾಕ್ಷಗೌಡ ಬಿರಾದಾರ್
ಕೊಪ್ಪಳ: ಮಲ್ಲಿಕಾರ್ಜುನಗೌಡ ವಿರುಪಾಕ್ಷಗೌಡ ಬಿರಾದಾರ್ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ಅಧ್ಯಯನ ವಿಭಾಗದಲ್ಲಿ ಡಾಕ್ಟರೇಟ್ (ಪಿ.ಎಚ್.ಡಿ )ಪದವಿ ಪಡೆದಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮಹೇಶ್ವರಿ ಕಾಚಾಪುರ್ ರವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧದ ಶೀರ್ಷಿಕೆ "ಎ ಕಂಪೆರೆಟಿವ್ ಸ್ಟಡಿ ಆನ್ ಪ್ರಾಬ್ಲೆಮ್ಸ್ ಆಫ್ ಮೆನ್ ಆಯಂಡ್ ವುಮೆನ್ ಪೊಲೀಸ್ ಕಾನ್ಸೆಬಲ್ಸ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್", ಎಂಬ ವಿಷಯದ ಮೇಲೆ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಅವರಿಗೆ ಪಿ.ಎಚ್.ಡಿ ಪದವಿ ನೀಡಲಾಗಿದೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರಧಾನ ಮಾಡಿದ್ದಕ್ಕೆ ಮಾರ್ಗದರ್ಶಕರು ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಕುಟುಂಬದವರು, ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
Next Story




