ಕೊಪ್ಪಳ | ಮಳೆಹಾನಿ ಪ್ರದೇಶಗಳಿಗೆ ಅಮ್ಜದ್ ಪಟೇಲ್ ನೇತೃತ್ವದ ಅಧಿಕಾರಿಗಳ ಭೇಟಿ

ಸುರಿದ ಭಾರಿ ಮಳೆಗೆ ಮನೆ ಯೊಳಗೆ ನುಗ್ಗಿದ ನೀರು, ಪಟೇಲ್ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ಆರಂಭ
ಕೊಪ್ಪಳ : ಶನಿವಾರ ಕೊಪ್ಪಳ ನಗರದಲ್ಲಿ ಸುರಿದ ಭಾರಿ ಮಳೆಗೆ ನಗರದ ವಿವಿಧ ವಾರ್ಡ್‌ಗಳ ಓಣಿಗಳಲ್ಲಿರುವ ಮನೆಯೊಳಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿ, ಸಾಮಾಗ್ರಿ ಗಳಿಗೆ ಹಾನಿ ಉಂಟಾಗಿದ್ದು, ರವಿವಾರ ದಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ನೇತೃತ್ವದ ನಗರಸಭೆಯ ಅಧಿಕಾರಿ, ಸಿಬ್ಬಂದಿಗಳ ತಂಡ ಮನೆ ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಗರದ 19 ಮತ್ತು 20ನೇ ವಾರ್ಡಿನ ಗಣೇಶನಗರ, 29ನೇ ವಾರ್ಡಿನ ಗವಿಶ್ರೀ ನಗರ್ ಹತ್ತನೇ ವಾರ್ಡಿನ ಕನಕಗಿರಿ ಓಣಿ ಸೇರಿದಂತೆ ನಗರದ ಪ್ರಮುಖ ಹೆದ್ದಾರಿ ಹೊಸಪೇಟೆ ಗದಗ್ ರಸ್ತೆ ಭಾಗದಲ್ಲಿ ಬರುವ ಮುಖ್ಯ ರಾಜ್ ಕಾಲುವೆಯಲ್ಲಿ ಮಳೆ ನೀರಿನ ರಭಸಕ್ಕೆ ಎಲ್ಲೆಡೆ ನೀರು ತುಂಬಿಕೊಂಡು ಸಾರ್ವಜನಿಕರಿಗೆ ನಷ್ಟ ಉಂಟಾಗಿದೆ. ಮುಖ್ಯ ರಾಜ ಕಾಲುವೆ ಬಸವೇಶ್ವರ ಸರ್ಕಲ್ ಮುಂದುಗಡೆ ಇರುವ ದೊಡ್ಡ ಚರಂಡಿ ಸಂಪೂರ್ಣ ತುಂಬಿ ನೀರು ಹರಿದಿರುವುದರಿಂದ ಅಲ್ಲಿಯೂ ಕೂಡ ಸಾರ್ವಜನಿಕರ ಜೀವನ ಅಸ್ತವೆಸ್ತಗೊಂಡಿದೆ. ಸದರಿ ಸ್ಥಳಕ್ಕೆ ಕೂಡ ನಗರಸಭೆ ತಂಡ ಭೇಟಿ ನೀಡಿ, ಪರಿಶೀಲನ ಕಾರ್ಯ ನಡೆಸಿದರು.
ಸದರಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆದಿರುವ ಎಲ್ಲಾ ಕಾಮಗಾರಿಗಳು ಕೂಡಲೇ ಪ್ರಾರಂಭ ಮಾಡಿ ಸಾರ್ವಜನಿಕರಿಗೆ ಅನುಕೂಲತೆಯನ್ನು ಮಾಡಿಕೊಡಲಾಗುವುದು ಎಂದು ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದರು.





