ಕೊಪ್ಪಳ | ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ದುರುಪಯೋಗ ಆರೋಪ : ಪಿಡಿಒ ಅಮಾನತು

ಗಂಗಾವತಿ : ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಹಣವಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಗೌಸ್ ಸಾಬ ಮುಲ್ಲಾ ಅಮಾನತಾದ ಅಧಿಕಾರಿ. ಇವರು ಗ್ರಾಮ ಪಂಚಾಯತ್ ಸದಸ್ಯರ 1.32 ಲಕ್ಷ ರೂ. ಗೌರವಧನ ಬೇರೆ ಕಾಮಗಾರಿಗೆ ಬಳಕೆ ಮಾಡಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಲ್ಲಪ್ಪ ದಾನಶೆಟ್ಟಿ ಎಂಬವರು ದೂರು ನೀಡಿದ್ದರು. ಈ ಕುರಿತು ತನಿಖೆಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಅವರನ್ನು ನಿಯೋಜಿಸಲಾಗಿತ್ತು.
ಇಒ ಅವರ ವರದಿಯ ಆಧಾರದ ಮೇಲೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣೀತ್ ನೇಗಿ ಅವರು ಗೌಸ್ ಸಾಬ ಮುಲ್ಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Next Story





