ಕೊಪ್ಪಳ | ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆ

ಕನಕಗಿರಿ:ಪಟ್ಟಣವು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಅದಕ್ಕೆ ಚ್ಯುತಿ ತರದಂತೆ ಪ್ರತಿಯೊಬ್ಬರು ಶಾಂತಿಯುತವಾಗಿ ಮೊಹರಂ ಆಚರಿಸಬೇಕು ಎಂದು ಪಿಐ ವಿ.ನಾರಾಯಣ ತಿಳಿಸಿದರು.
ಮೊಹರಂ ಹಬ್ಬದ ನಿಮಿತ್ತ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಪಿಐ ವಿ.ನಾರಾಯಣ, ಹಬ್ಬ ಹರಿದಿನಗಳು ಭಾವೈಕ್ಯತೆಯ ಸಂಕೇತಗಳಾಗಿವೆ. ಕಾನೂನು ಮೀರಿ ಯಾರೂ ವರ್ತಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ರಾಜಬೀದಿಯ ರಸ್ತೆಗೆ ಧಕ್ಕೆ ಆಗದಂತೆ ಅಲಾಯಿ ಕುಣಿಗೆ ಕಟ್ಟಿಗೆ ತುಂಡುಗಳನ್ನು ತರಬೇಕು, ಹಸಿ ಗಿಡಗಳನ್ನು ಕಡಿಯಬಾರದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಹಜರತ್ ಹುಸೇನ್, ಅಯ್ಯನಗೌಡ ಅರಳಹಳ್ಳಿ ಮಾತನಾಡಿ, ಸರ್ವ ಜನಾಂಗದವರ ಸಹಕಾರದಿಂದ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದೇ ಸಂಪ್ರದಾಯವನ್ನು ಮುಂದುವರೆಸಬೇಕು ಎಂದು ಕೋರಿದರು.
ಈ ವೇಳೆ ಪಿಎಸ್‌ಐ ಉಮೇಶ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಶಾಮೀದಸಾಬ, ಹನುಮೇಶ ಗಂಗಾಮತ, ಹೊನ್ನೂರಸಾಬ, ಉಮೇಶ ಮ್ಯಾಗಡೆ, ಮಂಜುನಾಥ, ನಜೀರಸಾಬ, ನೂರುಆಹ್ಮದ್, ನಾಗರಾಜ ಬೊಂದಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






