ಕೊಪ್ಪಳ | ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಖಂಡಿಸಿ ಪ್ರತಿಭಟನೆ

ಕೊಪ್ಪಳ : ಅಕ್ರಮವಾಗಿ ಹಣ ವರ್ಗಾವಣೆ ಆರೋಪದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿರುವುದನ್ನು ವಿರೋಧಿಸಿ ಕೊಪ್ಪಳದ ಆಶೋಕ ವೃತ್ತದ ಬಳಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಸಲೀಮ್ ಖಾದ್ರಿ ಮಾತನಾಡಿ, ಯಾರು ಬಿಜೆಪಿಗೆ ಶರಣಾಗುವುದಿಲ್ಲವೋ ಅವರೆನೆಲ್ಲಾ ಈಡಿ ಮತ್ತು ಸಿಬಿಐ ಕುಣಿಗೆ ದೂಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಎಂ.ಕೆ.ಫೈಝಿಯವರ ಬೆನ್ನ ಹಿಂದೆ ಈಡಿ ಬಿದ್ದಿತ್ತು, ಅವರ ವಿರುದ್ಧ ಏನು ಸಾಕ್ಷ್ಯಾಧಾರ ಸಿಗದೇ ಹೋದಾಗ ಪಿಎಂಎಲ್ಎ ಬಳಸಿ ಬಂಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಹುಜೂರ್ ಅಹ್ಮದ್, ನಿಜಾಮುದ್ದಿನ್ ಮಾಳೆಕೊಪ್ಪ, ಕಾರ್ಯದರ್ಶಿ ಮುಹಮ್ಮದ್ ಸಾಧಿಕ್, ಸಹಕಾರ್ಯದರ್ಶಿ ಅರ್ಷದ್ ಶೇಕ್, ಉಪಾಧ್ಯಕ್ಷರು ಫಾರೂಕ್ ಅತ್ತಾರ್, ಜಿಲ್ಲಾ ಕಾರ್ಯದರ್ಶಿಯಾದ ರಜೀ ಉರ್ ರೆಹಮಾನ್, ಮತ್ತು ಮಾಧ್ಯಮ ಸಂಚಾಲಕ ಮಿನಾಜ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





