ಕೊಪ್ಪಳ | ಗವಿಸಿದ್ದಪ್ಪ ನಾಯಕ್ ಕೊಲೆ ಖಂಡಿಸಿ ಆ.11ರಂದು ಪ್ರತಿಭಟನೆ : ಡಾ.ಕೆ.ಎನ್.ಪಾಟೀಲ್

ಕೊಪ್ಪಳ : ಗವಿಸಿದ್ದಪ್ಪ ನಾಯಕ್ ಕೊಲೆ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕದಿಂದ ಆ.11ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಾತಿ, ಪಕ್ಷ ಭೇದ ತೊರೆದು ಎಲ್ಲರೂ ಭಾಗಿಯಾಗಿ ಬೆಂಬಲಿಸುವಂತೆ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ಪಾಟೀಲ್ ಹೇಳಿದರು.
ಈ ಕೊಲೆ ಪ್ರಕರಣದ ಹಿಂದೆ ಯಾರೇ ಇರಲಿ, ಅವರಿಗೆ ಶಿಕ್ಷೆಯಾಗಬೇಕು ಎನ್ನುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ ಯಾವುದೇ ಪಕ್ಷ, ಜಾತಿ, ಸಂಟನೆಯವರು ಇರಲಿ ಎಲ್ಲರೂ ನ್ಯಾಯಕ್ಕಾಗಿ ನಮ್ಮೊಡನೆ ಕೈ ಜೋಡಿಸಿ, ಯಾವುದೇ ಪಕ್ಷ ಅಥವಾ ಸಂಘಟನೆ ಬ್ಯಾನರ್‌ಗಳು ಬೇಡ, ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು ಎನ್ನುವ ಉದ್ದೇಶದಿಂದ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಪ್ರಮುಖರಾದ ಸುರೇಶ ಡೊಣ್ಣಿ,ಶರಣಪ್ಪ ನಾಯಕ, ನಾಗರಾಜ ಬಿಲ್ಗಾರ, ನಿಂಗಪ್ಪ ನಾಯಕ,. ರವಿಕುಮಾರ ಬನ್ನಿಕೊಪ್ಪ, ಶಾಂತಪ್ಪ ಪೂಜಾರ, ನಿಂಗಜ್ಜ ದದೇಗಲ್, ಡಾ.ಗೀತಾ ಮತ್ತಾಳ, ಮೃತ ಯವಕನ ತಂದೆ ನಿಂಗಪ್ಪ ನಾಯಕ, ಗವಿಸಿದ್ದಪ್ಪ ನಾಯಕ ಕುಟುಂಬದವರು ಇದ್ದರು.





