ಕೊಪ್ಪಳ | ತೋಳ ಸಂರಕ್ಷಿತ ಪ್ರದೇಶದಲ್ಲಿ ಮರಳು ಮಾಫಿಯಾ

ಕೊಪ್ಪಳ, ಡಿ.11: ಈಚೆಗೆ ಕರ್ನಾಟಕ ಸರಕಾರ ತೋಳಧಾಮ ಎಂದು ಸಂರಕ್ಷಿತ ಪ್ರದೇಶವಾದ ಬಂಕಾಪುರ, ಕರಡಿಗುಡ್ಡ, ಚಿಕ್ಕಮ್ಮದಿನಾಳ, ರಾಮದುರ್ಗ ಗ್ರಾಮದಲ್ಲಿ ರಾತ್ರಿವೇಳೆ ಆಕ್ರಮ ಮರುಳು ದಂದೆ ಎಗ್ಗಿಲದೇ ನಡೆಯುತ್ತಿದ್ದೂ, ರಾತ್ರಿವೇಳೆ ಪ್ರಾಣಿಪಕ್ಷಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ರಾಮದುರ್ಗ, ರಾಂಪುರ ಮತ್ತು ರಾಮದುರ್ಗ ಕೆರೆಯಲ್ಲಿರುವ ಮಣ್ಣನ್ನು ತಗೆದುಕೊಂಡು ಬಂದು ಅದನ್ನು ಪಿಲ್ಟರ್ ಮಾಡಿದ ನಂತರ ಮರಳನ್ನಾಗಿ ಪರಿವರ್ತಿಸಿ ದಂಧೆಕೋರರು ಮಾರಾಟ ಮಾಡುತ್ತಿದ್ದಾರೆ. ಆದರೆ ಯಾರು ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನರು ದೂರುತಿದ್ದಾರೆ.
ಸಾರ್ವಜನಿಕರಿಗೆ ಕಷ್ಟ :
ಮರಳಿನ ಬೆಲೆ ಏರಿಕೆ ಮಾತ್ರವಲ್ಲದೆ, ಸಾರ್ವಜನಿಕರಿಗೆ ಮರಳುಗಾರಿಕೆಯಿಂದ ಅನೇಕ ತೊಂದರೆಗಳೂ ಇವೆ. ಮಣ್ಣಿನ ರಸ್ತೆಯಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಧೂಳಿನಿಂದ ಮಿಂದೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅನುಮತಿ ರಹಿತ ಮರಳು ಸಾಗಾಟವೇ ಅಧಿಕವಾಗಿರುವುದರಿಂದ ಪೊಲೀಸರ ಭಯದಲ್ಲಿ ಚಾಲಕರು ಅಧಿಕ ವೇಗದಲ್ಲಿ ಲಾರಿ ಚಲಾಯಿಸಿ, ಅಪಘಾತವಾಗುವ ಸಂಭವವೂ ಇದೆ.ಏನು ಮಾಡಬಹುದು: ಮರಳು ದಂಧೆ ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೊರ ಜಿಲ್ಲೆ, ರಾಜ್ಯಕ್ಕೆ ಮರಳು ಸಾಗಾಟವಾಗದಂತೆ ತಡೆಯುವುದು, ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡುವ ಲಾರಿ ಮುಟ್ಟುಗೋಲು ಹಾಕಿ, ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು, ಅಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕುತಿದ್ದಾರೆ.
ಕನಕಗಿರಿಯಲ್ಲಿ ಚಿನ್ನದ ಬೆಲೆ :
ಕನಕಗಿರಿಯಲ್ಲಿ ಮರಳು ಚಿನ್ನದ ಬೆಲೆಗೆ ಮಾರಾಟವಾಗುತ್ತಿದೆ. ನವಲಿಯಿಂದ ಕನಕಗಿರಿ, ಕೊಪ್ಪಳ, ರಾಯಚೂರು, ತಾವರಗೇರ, ಸಿಂಧನೂರು, ಕುಷ್ಟಗಿ, ತಲುಪುವಲ್ಲಿ ತನಕ ಲಂಚಬಾಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಬೇಕಾಗಿದೆ. ಹೀಗಾಗಿ ಒಂದು ಟಿಪ್ಪರ್ ಮರಳು 25,000 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹಿಂದಿನ ವರ್ಷ ಒಂದು ಲೋಡ್ ಮರಳಿನ ಬೆಲೆ 56,000 ರೂ.ಆಗಿತ್ತು.
ಅರಣ್ಯ ಭೂಮಿಯಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲ. ಅದು ಕಂದಾಯ ಕೆರೆಯಲ್ಲಿ ನಡೆಯುತ್ತಿತ್ತು. ಈ ಕುರಿತು ಕನಕಗಿರಿ ತಹಶೀಲ್ದಾರ್ ದೂರು ನೀಡಿದ್ದಾರೆ, ನಾವು ಇಂತಹ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ.
-ಸುಲೇಮಾನ್ ಅರಣ್ಯ ಇಲಾಖೆ ಅಧಿಕಾರಿಗಳು, ಗಂಗವಾತಿ
ಎಲ್ಲೆಲ್ಲಿ ಮರಳು ಸಾಗಾಟ
ನವಲಿ, ಉದ್ದಿಹಾಳ, ಸಂಕನಾಳ, ಮಲ್ಲಾಪುರ, ಯತ್ನಾಟ್ಟಿ, ಬುನ್ನಟ್ಟಿ, ರಾಂಪುರ ಗ್ರಾಮಗಳಲ್ಲಿ ಅತೀ ಹೆಚ್ಚು ಮರಳು ಮಾಫಿ ನಡೆಯುತ್ತಿದ್ದೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ.
ಅಕ್ರಮ ಮರಳುಗಾರಿಕೆಗೆ ನಡೆಯುವ ದಾಳಿಗಳೂ ’ಮಾಮೂಲು’ ಆಗಿಬಿಟ್ಟಿವೆ. ದಾಳಿ ನಡೆದ ಒಂದೆರಡು ದಿನಗಳಲ್ಲೇ ಮತ್ತೆ ಮರಳುಗಾರಿಕೆ ಅವ್ಯಾಹತ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವವರು, ಮರಳು ಉದ್ಯಮಿಗಳಿಗೆ ಮಾಹಿತಿ ನೀಡಿಯೇ ದಾಳಿ ನಡೆಸುತ್ತಾರೆ, ದಾಳಿಯಿಂದ ಕಾನೂನಾತ್ಮಕವಾಗಿ ತೆಗೆದುಕೊಂಡ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ.
-ಹನುಮಂತಪ್ಪ ಚಿಕ್ಕಮಾದಿನಾಳ ಗ್ರಾಮಸ್ಥ







