Koppal : ಹನುಮಸಾಗರದಲ್ಲಿ ಹಲವು ಅಂಗಡಿಗಳಿಗೆ ನುಗ್ಗಿ ನಗದು ದೋಚಿದ ಕಳ್ಳರು

ಹನುಮಸಾಗರ: ಪಟ್ಟಣದಲ್ಲಿ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಇಬ್ಬರು ಕಳ್ಳರು ವಿವಿಧ ಅಂಗಡಿಗಳಿಗೆ ನುಗ್ಗಿ ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ.
ವಿಶ್ವನಾಥ್ ನಾಗೂರ್ ಅವರಿಗೆ ಸೇರಿದ ಲಕ್ಷ್ಮಿ ವೆಂಕಟೇಶ್ವರ ಮೆಡಿಕಲ್ ಸ್ಟೋರ್‌ಗೆ ನುಗ್ಗಿದ ಕಳ್ಳರು ಸುಮಾರು 30,000 ರೂ. ನಗದು ದೋಚಿರುವುದಾಗಿ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ವೇಳೆ ಪರಶುರಾಮ್ ಪಾಟೀಲ್ ಅವರಿಗೆ ಸೇರಿದ ಅಂಗಡಿಯ ಬೀಗವನ್ನು ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಅಲ್ಲದೆ ಪಕ್ಕದಲ್ಲಿರುವ ಸುರೇಶ್ ಹುಲಿಮನಿ ಅವರಿಗೆ ಸೇರಿದ ರಾಘವೇಂದ್ರ ಸ್ವೀಟ್ ಬೇಕರಿ ಅಂಗಡಿಯಿಂದ ವಿಮಲ್ ಹಾಗೂ ಸುಮಾರು 10,000 ರೂ. ನಗದು ಕಳವಾಗಿರುವುದು ತಿಳಿದುಬಂದಿದೆ.
ಕಳ್ಳತನದ ದೃಶ್ಯಗಳು ಅಂಗಡಿಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





