"ತಾಂತ್ರಿಕ ದೋಷದಿಂದ ಸಮಸ್ಯೆ ಆಗಿತ್ತು": ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಅಲಭ್ಯತೆ ಕುರಿತ ಸುದ್ದಿಗೆ ಕೊಪ್ಪಳ ವಿವಿ ಸ್ಪಷ್ಟನೆ

ಕೊಪ್ಪಳ: ಕೊಪ್ಪಳ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳೇ ಸಿಗದ ಸುದ್ದಿ ಕುರಿತು ಇಂದು ವಿಶ್ವ ವಿದ್ಯಾಲಯವು ಸ್ಪಷ್ಟನೆ ನೀಡಿದೆ.
ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಗಸ್ಟ್ 2ರಿಂದ ಆರಂಭವಾಗಿರುವ 2ನೇ ಸೆಮಿಸ್ಟರ್ ಹಾಗೂ 4ನೇ ಸೆಮಿಸ್ಟರ್ ಅಂತಿಮ ಪರೀಕ್ಷೆಗಳು ಆಗಸ್ಟ್ 14ರಂದು ಮುಕ್ತಾಯಗೊಳ್ಳಲಿವೆ.
ಆದರೆ, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ನೀಡಲಾದ ಪ್ರವೇಶ ಪತ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಆಗಸ್ಟ್ 14ರಂದು ನಡೆಯಬೇಕಿದ್ದ ಪರೀಕ್ಷೆಯ ದಿನಾಂಕವನ್ನು ತಪ್ಪಾಗಿ ಆಗಸ್ಟ್ 01 ಎಂದು ಮುದ್ರಣ ಮಾಡಲಾಗಿದೆ.
ಈ ದೋಷವನ್ನು ಗುರುತಿಸಿದ ನಂತರ ತಿದ್ದುಪಡಿ ಮಾಡಲಾಗಿದೆ ಎಂದು ಕುಲಸಚಿವರು (ಮೌಲ್ಯಮಾಪನ) ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
Next Story





