ಕೊಪ್ಪಳ ವಿವಿ ಎಡವಟ್ಟು; ಇಂದು ನಡೆಯುವ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳೇ ಇಲ್ಲ!
ವಿದ್ಯಾರ್ಥಿಗಳು ಕಂಗಾಲು

ಕೊಪ್ಪಳ: ಕೊಪ್ಪಳ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆದರೆ ವಿವಿ ಯ ಎಡವಟ್ಟಿನಿಂದ ಇಂದು ನಡೆಯಬೇಕಿದ್ದ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳೇ ಬಂದಿಲ್ಲ ಎಂದು ತಿಳಿದು ಬಂದಿದೆ.
ಇಂದು ಸ್ನಾತಕೋತ್ತರ ಪದವಿಯ ಟಿ.ವಿ ಜರ್ನಲಿಸಂ ಪ್ರೊಡೆಕ್ಷನ್ ಅಂಡ್ ಮ್ಯಾನೇಜ್ ಮೆಂಟ್ ಎಂಬ ವಿಷಯಕ್ಕೆ ಇಂದು ( 01-08-2025 ) ಪರೀಕ್ಷೆ ಇತ್ತು. ಅದರಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಹೋಗಿದ್ದಾರೆ. ಆದರೆ ಕಾಲೇಜಿನವರು ಪ್ರಶ್ನೆ ಪತ್ರಿಕೆಗಳು ಬಂದಿಲ್ಲ. ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಈ ಮೊದಲು ಇಂತಹ ಸಮಸ್ಯೆಗಳು ಈ ವಿಶ್ವ ವಿದ್ಯಾಲಯ ದಿಂದ ಇಂತಹ ಸಮಸ್ಯೆ ಆಗಿರಲಿಲ್ಲ, ಇಂದು ಆಗಿರುವ ಸಮಸ್ಯೆ ಯಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ನಮಗೆ ನೀಡಿದ ಪ್ರವೇಶ ಪತ್ರ (ಹಾಲ್ ಟಿಕೆಟ್) ದಲ್ಲಿ ಇಂದು ಪರೀಕ್ಷೆ ಇದೆ ಅಂತ ಇದೆ. ಅದರಂತೆ ನಾವು ನಮ್ಮ ತಯಾರಿ ನಡೆಸಿ ಬಂದಿದ್ದೆವು. ಕಾಲೇಜಿನವರು ಇಂದು ಪರೀಕ್ಷೆ ಇಲ್ಲ ಎಂದು ಹೇಳುತ್ತಿದ್ದಾರೆ.
ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ







