ಕೊಪ್ಪಳ | ನಿಂಗಾಪುರ ಸರಕಾರಿ ಶಾಲೆಯ ಬಿಸಿಯೂಟದಲ್ಲಿ ಹುಳ ಪತ್ತೆ

ಕೊಪ್ಪಳ: ಕೊಪ್ಪಳ ತಾಲ್ಲೂಕಿನ ಹಳೆ ನಿಂಗಾಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಕ್ಕಳಿಗೆ ಬಡಿಸಿದ ಊಟದಲ್ಲಿ ಹುಳಗಳು ಕಂಡುಬಂದಿದ್ದು, ಗಾಬರಿಗೊಂಡ ವಿದ್ಯಾರ್ಥಿಗಳು ಶಾಲೆಯ ಸಿಬ್ಬಂದಿ ಮತ್ತು ಪೋಷಕರಿಗೆ ತಿಳಿಸಿದ್ದಾರೆ. ಈ ಕುರಿತು ಶಾಲೆಯಲ್ಲಿ ನೀಡಲಾಗುತ್ತಿರುವ ಊಟ ಮತ್ತು ನೈರ್ಮಲ್ಯದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಬಿಸಿಯೂಟಕ್ಕೆ ಬಲಸಲಾಗುವ ಅಕ್ಕಿಯು ಅಕ್ಷರ ದಾಸೋಹದ ಮೂಲಕ ವಿತರಿಸಲಾಗುತ್ತಿದೆ. ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲಾಗುತ್ತಿರುವುದರಿಂದ ಹೀಗಾಗಿದೆ ಎನ್ನಲಾಗಿದೆ.
ಶಾಲೆಯ ಬಳಿ ಜಮಾಯಿಸಿದ ಪೋಷಕರು, ಬಿಸಿಯೂಟಕ್ಕೆ ಬಲಸಲಾಗುವ ಅಕ್ಕಿಯ ಗುಣಮಟ್ಟವನ್ನು ಪರಿಶೀಲಿಸುತ್ತಿಲ್ಲ. ಸಿಬ್ಬಂದಿಗಳು ಬೇಜಾವ್ದಾರಿ ಹೀಗೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





