ಕೊಪ್ಪಳ | 9ನೇ ದಿನ ಪೂರ್ಣಗೊಂಡ ಕಾರ್ಖಾನೆ ವಿರೋಧಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಕೊಪ್ಪಳ : ನಗರಕ್ಕೆ ಹೊಂದಿಕೊಂಡ ಬಲ್ಡೋಟ (ಬಿಎಸ್ಪಿಎಲ್) ವಿಸ್ತರಣೆ ವಿರೋಧಿಸಿ ಮತ್ತು ಎಂ.ಎಸ್.ಪಿ.ಎಲ್. ಕಾರ್ಖಾನೆ ಅತಿಕ್ರಮಣಗೊಳಿಸಿರುವ 44.35 ಎಕರೆಯ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಮತ್ತು ದೂಳು ಬಾಧಿತ ಜನರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಜಂಟಿ ಕ್ರಿಯಾ ವೇದಿಕೆಯಿಂದ ನಡೆಸಲಾಗುತ್ತಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ 9ನೇ ದಿನವನ್ನು ಪೂರ್ಣಗೊಳಿಸಿದೆ. 9ನೇ ದಿನಕ್ಕೆ ಬೆಂಬಲ ಸೂಚಿ ದಲಿತ ಸಂರ್ಘಷ ಸಮಿತಿ ಭೀಮವಾದ ಸಂಘಟನೆಯವು ಸತ್ಯಾಗ್ರಹದಲ್ಲಿ ಭಾಗವಹಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ ಸಂಗಾಪುರ, ತುಂಗಭದ್ರಾ ನದಿ ತಟ ಮತ್ತು ಜಲಾಶಯದ ಹಿನ್ನೀರ ಒಡಲಲ್ಲಿ ಸ್ಥಾಪನೆಯಾದ ಈ ಕಾರ್ಖಾನೆಗಳು ಕೇವಲ ಕೊಪ್ಪಳದಲ್ಲಿ ಮಾಲಿನ್ಯ ಮಾಡಿಲ್ಲ. ರೈತರು ಬಳಸಿಕೊಳ್ಳುವ ತುಂಗಭದ್ರಾ ನೀರನ್ನು ಲೆಕ್ಕವಿಲ್ಲದ ಪ್ರಮಾಣದಲ್ಲಿ ಬಳಸಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ 3 ಕೋಟಿ ಜನರ ನೀರಿನ ಹಕ್ಕು ಕಸಿದುಕೊಳ್ಳುವ ಮೂಲಕ ಅಷ್ಟೂ ಜನರಿಗೆ ಮೋಸ ಮಾಡಿವೆ ಎಂದು ಹೇಳಿದರು.
ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ ಇವರು ಏನು ಮಾಡುತ್ತಿದ್ದಾರೆ? ಇವರಿಗೆ ಇಂದು ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಇಲ್ಲವೆ? ಗವಿಮಠದ ಸ್ವಾಮೀಜಿ ಹೇಳಿದ್ದಕ್ಕೆ ತಡೆ ಆದೇಶ ತರದಿದ್ದರೆ ಇವರೆಲ್ಲಾ ರಾಜೀನಾಮೆ ಕೊಡಲಿ ಎಂದು ಹೇಳಿದರು.
ದಲಿತ ಮುಖಂಡ ಪ್ರಕಾಶ ಎಚ್. ಹೊಳೆಯಪ್ಪನವರು ಮಾತನಾಡಿ, ಇಲ್ಲಿ ವಿಸ್ತರಣೆಗೆ ಮುಂದಾಗಿರುವ ಬಲ್ಡೋಟ ದಿಂದ ಅವಳಿ ನಗರದ 1.5 ಲಕ್ಷ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.
ಧರಣಿಯಲ್ಲಿ ಕೆ.ಎಂ.ಆರ್.ವಿ. ಜಿಲ್ಲಾಧ್ಯಕ್ಷ ಮುದಕಪ್ಪ ಎಂ.ಹೊಸಮನಿ, ಸಂಯೋಜಕ ಸಮಿತಿ ಜಿಲ್ಲಾಧ್ಯಕ್ಷ ರಾಮಪ್ಪ ಎಂ.ಗುಡ್ಲಾನೂರು, ನಿಂಗಪ್ಪ ಜಿ.ಎಸ್. ಬೆಣಕಲ್, ಎಂ.ಕೆ.ಸಾಹೇಬ್ ಮಾತನಾಡಿದರು.
ಧರಣಿ ನೇತೃತ್ವವನ್ನು ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಖಬೂಲ್ ರಾಯಚೂರು, ಬಸವರಾಜ ನರೇಗಲ್, ಮಹಾದೇವಪ್ಪ ಎಸ್.ಮಾವಿನಮಡು, ಸುಂಕಪ್ಪ ಮೀಸಿ ವಹಿಸಿದ್ದರು.
ಧರಣಿಯಲ್ಲಿ ಎಂ.ಮಾರುತಿ, ಗಾಳೆಪ್ಪ ಪೂಜಾರ, ಚನ್ನವೀರಯ್ಯ ಹಿರೇಮಠ, ಫಕೀರಪ್ಪ ದೊಡ್ಡಮನಿ, ಸುರೇಶ ಪೂಜಾರ, ಸಿದ್ದಪ್ಪ ಬೇಳೂರು, ಮಾರುತಿ ಪೂಜಾರ, ಫಾಸ್ಟರ್ ಚನ್ನಬಸಪ್ಪ ಅಪ್ಪಣ್ಣವರ, ಶಿವು ಹತ್ತಿಕಟಿಗಿ, ಬಸವರಾಜ ಶೀಲವಂತರ, ಶಿವಪ್ಪ ಹಡಪದ, ಶರಣಬಸಪ್ಪ ದಾನಕೈ, ಅಮರೇಶ ಕರಡಿ, ಫಕ್ರುಸಾಬ ಹೊಸಕೇರಿ, ಕೆಂಚಪ್ಪ ವೀರಾಪುರ, ಸುರೇಶ ಹಿಟ್ನಾಳ್, ಶಿವಪ್ರಸಾದ ಆರ್. ರಾಮಸ್ವರೂಪ ಕೆ. ನಾಗರಾಜ ಕೆ.ಎಂ. ತಿಮ್ಮಣ್ಣ ಭೋವಿ ಉಪಸ್ಥಿತರಿದ್ದರು.







